ಸಂವಿಧಾನ ಶಿಲ್ಪಿ ಡಾ. ಬಿ. ಆರ್‌ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಶ್ರೀ ಮಹಾವೀರ ಕಾಲೇಜಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತುಂಬೆ ಪ್ರೌಢಶಾಲೆಯ ಶಿಕ್ಷಕರಾದ ರಮೇಶ್ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ “ವಿಶ್ವದಅಸಾಮಾನ್ಯ ಸಾಧಕರಲ್ಲಿ ಒಬ್ಬರಾದ ಡಾ. ಬಿ. ಆರ್.ಅಂಬೇಡ್ಕರ್ ಶಿಕ್ಷಣ ಪಡೆಯುವುದನ್ನೇ ತಮ್ಮ ಧ್ಯೇಯವಾಗಿಸಿಕೊಂಡು 32 ಪದವಿಗಳನ್ನು ಪಡೆದರು.

ಹೆಣ್ಣುಮಕ್ಕಳು ಮತ್ತು ಸಮಾಜದ ದುರ್ಬಲ ವರ್ಗದವರಿಗೆ ಶಿಕ್ಷಣ ಪಡೆಯುವ ಹಾಗೂ ಮತ ಚಲಾಯಿಸುವ ಅಧಿಕಾರವನ್ನು ಸಂವಿಧಾನದ ಮೂಲಕ ನೀಡಿದರು. ಅಂಬೇಡ್ಕರ್‌ಅವರ ತತ್ವಾದರ್ಶಗಳನ್ನು ಒಳಗೊಂಡ ಅಂಬೇಡ್ಕರ್ ವಾದವು ಸಾಮಾಜಿಕ ನೈತಿಕತೆಯನ್ನು ಬೋಧಿಸುತ್ತದೆ”ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರಜೈನ್ ಮಾತನಾಡಿ, ‘ಹದಿನಾಲ್ಕು ಜನರ ಸಮಿತಿಯ ನೇತೃತ್ವ ವಹಿಸಿ, ದೂರದೃಷ್ಟಿಯಿಂದ ಆಲೋಚಿಸಿ, ಪ್ರಜಾಪ್ರಭುತ್ವದ ತತ್ವಗಳಿಗೆ ಅನುಗುಣವಾಗಿ ಬಾಬಾಸಾಹೇಬರು ಸಂವಿಧಾನವನ್ನು ರಚಿಸಿದರು. ಸಂವಿಧಾನದ ಶಕ್ತಿಯಿಂದ ಹಿಂದುಳಿದ ವರ್ಗದಜನರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಯಿತು’ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಮಾತನಾಡಿ, ‘ಮನೆ ಗಟ್ಟಿಯಾಗಿರಲು ಅಗತ್ಯವಿರುವುದು ಭದ್ರ ಬುನಾದಿ. ಹಾಗೆಯೇದೇಶದ ಸಾಮಾಜಿಕ–ರಾಜಕೀಯ ವ್ಯವಸ್ಥೆ ಸ್ಥಿರವಾಗಿರಲು ಅಗತ್ಯವಾದ ಸಂವಿಧಾನವನ್ನು ರಚಿಸಲು ಕಾರಣಕರ್ತರಾದವರು ಡಾ. ಬಿ. ಆರ್.ಅಂಬೇಡ್ಕರ್’ಎಂದರು.
ಅಂಬೇಡ್ಕರ್ ಜಯಂತಿ ಪ್ರಯುಕ್ತ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಲೆ. ವಿಜಯಲಕ್ಷ್ಮಿ, ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥಡಾ.ಚಿನ್ನಸ್ವಾಮಿಎನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ವರನ್ನೂ ಸ್ವಾಗತಿಸಿದರು. ಅಂತಿಮ ಬಿ.ಎಸ್ಸಿ. ವಿದ್ಯಾರ್ಥಿನಿ ರಕ್ಷಿತಾ ನಿರೂಪಿಸಿ, ಪ್ರಥಮ ಬಿ.ಎಸ್ಸಿ. ವಿದ್ಯಾರ್ಥಿನಿ ಶ್ರಾವ್ಯ ವಂದಿಸಿದರು.

