ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು…
ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಪಂಚಮುಖಿ ಗಾಯತ್ರಿ ದೇವಿಯ ಬ್ರಹ್ಮ ಕುಂಭಾಭಿಷೇಕ ಮಹೋತ್ಸವಕ್ಕೆ ಹೆಗ್ಗಡೆಯವರನ್ನು ಆತ್ಮೀಯವಾಗಿ ಆಮಂತ್ರಿಸಲಾಯಿತು..
ಕಾಲ ಗರ್ಭದಲ್ಲಿ ಅಳಿದು ಹೋದ ಶಕ್ತಿ ಚೈತನ್ಯಗಳು ಶ್ರೀ ರಮಾನಂದ ಗುರೂಜಿಯವರಿಗೆ ಆಧ್ಯಾತ್ಮಿಕ ಕಂಪನದಿಂದ ತಮ್ಮ ಅಸ್ತಿತ್ವವನ್ನು ತೋರಿಸಿಕೊಟ್ಟು ಪುನಶ್ಚೇತನಗೊಂಡು ಭಕ್ತರನ್ನು ಅನುಗ್ರಹಿಸುವ ವಿಶಿಷ್ಟ ಶಕ್ತಿ ಕೇಂದ್ರ ಕೇಂದ್ರವಾದ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಶ್ರೀ ಕಪಿಲ ಮಹರ್ಷಿಗಳ ದಿವ್ಯ ಸಾನಿಧ್ಯದ ಗಾಯತ್ರಿ ಧ್ಯಾನಪೀಠದಲ್ಲಿ ನಿರ್ಮಾಣಗೊಂಡ ನೂತನ ಶಿಲಾಮಯ ಗುಡಿಯಲ್ಲಿ ಪಂಚಮುಖಿ ಗಾಯತ್ರಿ ದೇವಿ ಪ್ರತಿಷ್ಠಾಪನೆ ಯಾಗಲಿದೆ.
ಪೀಠಾಧಿಪತಿಗಳು, ಉದ್ಯಮಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಏಪ್ರಿಲ್ ತಿಂಗಳ ತಾರೀಕು 30 ರಿಂದ ಮೇ ತಿಂಗಳ ತಾರೀಕು ನಾಲ್ಕರವರೆಗೆ ನೆರವೇರಲಿದ್ದು ಎಲ್ಲಾ ಕಾರ್ಯಕ್ರಮಗಳು ಮಂಜುನಾಥನ ಅನುಗ್ರಹದಿಂದ ಸಾಂಗವಾಗಿ ನೆರವರಲ್ಲಿ ಎಂದು ಹಾರೈಸಿದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ