ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು, ವಿದ್ಯಾಗಿರಿ, ಬಂಟ್ವಾಳ : ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

0
10

ಬಂಟ್ವಾಳ : ಕನ್ನಡ ಸಾಹಿತ್ಯ ಪರಿಷತ್ತುದೇಶದಲ್ಲಿಯೇಅತ್ಯಂತ ವ್ಯವಸ್ಥಿತವಾಗಿ ರಚನೆಯಾದ ಸಂಸ್ಥೆಯಾಗಿದ್ದು, ಕನ್ನಡ ಭಾಷೆ, ಸಾಹಿತ್ಯದಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳುವುದರ ಮೂಲಕ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದು ದಕ್ಷಿಣಕನ್ನಡಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷರಾದ ಡಾ.ಎಂ.ಪಿ ಶ್ರೀನಾಥ ಕರೆನೀಡಿದರು.ಇವರು ದಕ್ಷಿಣ ಕನ್ನಡ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಹಾಗೂ ಶ್ರೀ ವೆಂಕಟರಮಣಸ್ವಾಮೀ ಮಹಾವಿದ್ಯಾಲಯ, ಬಂಟ್ವಾಳ ಇವರ ಸಂಯುಕ್ತಾಶ್ರಯದಲ್ಲಿ ನಡೆದಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀ ಮಹಾಬಲೇಶ್ವರ ಹೆಬ್ಬಾರ್‌ರವರುಭಾಷೆಇತಿಹಾಸವನ್ನುಕೊಂಡೊಯ್ಯುವ ಪ್ರವಾಹವಿದ್ದಂತೆಎನ್ನುತ್ತಾಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣರಾದ ಮೈಸೂರಿನ ನಾಲ್ವಡಿಕೃಷ್ಣರಾಜಒಡೆಯರ್, ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಸರ್ ಮಿರ್ಜಾಇಸ್ಮಾಯಿಲ್‌ರವರ ಕೊಡುಗೆಗಳನ್ನು ತಿಳಿಸಿದರು.

ಎಸ್.ವಿ.ಎಸ್.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಡಿ.ಮAಚಿಯವರುಕಾರ್ಯಕ್ರಮದ ಅಧ್ಯಕ್ಷತೆವಹಿಸಿಕನ್ನಡ ಸಾಹಿತ್ಯ ಪರಿಷತ್ತುಕನ್ನಡ ಭಾಷೆಯ ಉಳಿವು ಹಾಗೂ ಅಭಿವೃದ್ಧಿಗೆತನ್ನದೇ ಆದ ಕೊಡುಗೆಯನ್ನು ನೀಡಿದೆ. ಈ ಸಂಸ್ಥೆಯು ಯಾವುದೇ ಪ್ರಚಾರ ಬಯಸದೇ ಸಾಹಿತ್ಯ ಪ್ರಚಾರಕ್ಕೆ ಅವಿರತ ಶ್ರಮಿಸುತ್ತಿದೆ ಎಂದು ನುಡಿದರು.

ವೇದಿಕೆಯಲ್ಲಿ ಶ್ರೀ ವಿಶ್ವನಾಥ ಬಂಟ್ವಾಳ, ಅಧ್ಯಕ್ಷರು, ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪೂವಪ್ಪ ನೇರಳೆಕಟ್ಟೆ, ಕಾರ್ಯಕಾರಿ ಸದಸ್ಯರು, ದಕ್ಷಿಣಕನ್ನಡಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಇವರು ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಣ್ಣಪ್ರಭು ಸ್ವಾಗತಿಸಿ, ರಸಾಯನ ಶಾಸ್ತç ವಿಭಾಗದ ಮುಖ್ಯಸ್ಥರಾದಡಾ.ಸುಯೋಗವರ್ಧನ್‌ಡಿ.ಎಮ್.ವಂದಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಕಾಶೀನಾಥ ಶಾಸ್ತಿç ಹೆಚ್.ವಿ. ನಿರೂಪಿಸಿದರು. ವಿದ್ಯಾರ್ಥಿನಿಯರಾದ ವಂದಿತಾಮತ್ತು ಪನ್ನಗಶ್ರೀ ನಾಡಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ಸದಸ್ಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here