ಬಂಟ್ವಾಳ : ಶ್ರೀಮಂತರು ಬಡವರನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟವ್ಯವಸ್ಥೆಯೇಜೀತಪದ್ಧತಿಯಾಗಿದೆ. ಧನಿಕರು ಬಡವರಿಗೆ ಹಣ ಹಾಗೂ ಇನ್ನಿತರೆರೂಪದಲ್ಲಿಕೊಟ್ಟಂತಹದ್ದನ್ನುಅಧಿಕ ಬಡ್ಡಿರೂಪದಲ್ಲಿ ಹೆಚ್ಚಿಸಿ ಅವರನ್ನುಅಮಾನುಷವಾಗಿ ದುಡಿಸಿಕೊಳ್ಳುವ ಅನಿಷ್ಟಪದ್ಧತಿಯಾಗಿದೆಎಂದು ಪ್ರಾಂಶುಪಾಲರಾದ ಪ್ರೊ.ಎಂ.ಡಿ.ಮಂಚಿ ನುಡಿದರು.

ಇವರುಕಾಲೇಜಿನಎನ್.ಎಸ್.ಎಸ್. ಘಟಕದ ವತಿಯಿಂದ ನಡೆದ ‘ಜೀತಪದ್ಧತಿರದ್ಧತಿ ಪ್ರತಿಜ್ಞಾಕಾರ್ಯಕ್ರಮ’ದಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸುಯೋಗವರ್ಧನ್ ಡಿ.ಎಮ್. ಜೀತಪದ್ಧತಿ ರದ್ಧತಿ ಪ್ರತಿಜ್ಞಾವಿಧಿ ಬೋಧಿಸಿದರು. ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತಿç ಹೆಚ್.ವಿ. ನಿರೂಪಿಸಿ, ಸ್ವಾಗತಿಸಿದರು. ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಸಹನಾ ವಂದಿಸಿದರು.

