ರಾಜ್ಯ ಕಂಬಳ ಅಸೋಸಿಯೇಶನ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ: ₹5 ಕೋಟಿ ಅನುದಾನ ಹಾಗೂ ಕಂಬಳ ಭವನಕ್ಕೆ 2 ಎಕರೆ ಜಾಗಕ್ಕೆ ಮನವಿ

0
67

ಮಂಗಳೂರು : ಕರ್ನಾಟಕ ರಾಜ್ಯದ ಘನವೆತ್ತ ಸನ್ಮಾನ್ಯ ಮುಖ್ಯ ಮಂತ್ರಿಗಳಾದಂತ ಸಿದ್ದರಾಮಯ್ಯನವರನ್ನು ಕಂಬಳ ಸಮಿತಿಯ ರಾಜ್ಯ ಅಸೋಸಿಯೇಶನ್‌ನ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಹಾಗೂ ವಿಧಾನ ಪರಿಷತ್ತ್‌ ಸದಸ್ಯರಾದ ಐವನ್ ಡಿಸೋಜಾ ಸಹಿತ ನಿಯೋಗ ಭೇಟಿ ನೀಡಿ ಕಂಬಳಕ್ಕೆ ಬಜೆಟ್‌ನಲ್ಲಿ 5 ಕೋಟಿ ಅನುದಾನವನ್ನು ಮೀಸಲಿರಿಸಬೇಕು. ಕಂಬಳ ಒಂದು ಅಂತರಾಷ್ಟ್ರೀಯ ಮನ್ನಣೆ ಗಳಿಸಿದ ಕ್ರೀಡೆ ತಾವು ವಿಶೇಷವಾಗಿ ಕಂಬಳವನ್ನು ಪರಿಗಣಿಸಿ ರಾಜ್ಯ ಸರ್ಕಾರದ ಮಾನ್ಯತೆ ನೀಡಿ ರಾಜ್ಯ ಕಂಬಳ ಅಸೋಸಿಯೇಶನ್ ಅನ್ನು ನೇಮಕ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತಾ ನಮ್ಮ ರೈತಾಪಿ ವರ್ಗದ ಜೀವನಾಡಿ ಕಂಬಳಕ್ಕೆ ಪ್ರವಾಸೋದ್ಯಮ ಇಲಾಖೆ, ಕ್ರೀಡಾ ಇಲಾಖೆ, ಕನ್ನಡ ಮತ್ತು ಸಾಂಸ್ಕ್ರತಿಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಮುಖಾಂತರ ಸಿಗುವಂತ ಎಲ್ಲಾ ಸವಲತ್ತುಗಳನ್ನು ಕಂಬಳದ ಓಟಗಾರರಿಗೆ, ತೀರ್ಪುಗಾರರಿಗೆ, ವ್ಯವಸ್ಥಾಪಕರಿಗೆ ಮತ್ತು ಪರಿಚಾರಕ ವರ್ಗದವರಿಗೆ ಒದಗಿಸಿ ಕೊಡಬೇಕು. ಕಂಬಳಕ್ಕೆ ವಿಶೇಷ ಅನುದಾನದೊಂದಿಗೆ ಕಂಬಳ ಭವನ ನಿರ್ಮಿಸಲು 2ಎಕರೆ ಜಾಗ ಸರ್ಕಾರದಿಂದ ಮಂಜೂರು ಮಾಡಿಸುವಂತೆ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ವಿನಂತಿಸಿದರು.

ಮುಖ್ಯ ಮಂತ್ರಿಗಳು ಕಂಬಳ ಕ್ರೀಡೆ ಅದೊಂದು ರಾಜ್ಯದ ಜನಪ್ರಿಯ ಕ್ರೀಡೆಯಾಗಿ ಮೂಡಿಬರಬೇಕು ಕಂಬಳ ಕ್ರೀಡೆಗೆ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂಬ ಆಶ್ವಾಸನೆ ನೀಡಿದರು.

LEAVE A REPLY

Please enter your comment!
Please enter your name here