ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ವಿಜೇತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನ 27ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ವಾಯ್ಸ್ ಆಫ್ ಆರಾಧನಾ ಪ್ರತಿಭೆಗಳಿಂದ ರಾಜ್ಯ ಮಟ್ಟದ ಮಕ್ಕಳ ಹಬ್ಬ – ವಿವಿಧ ಜಿಲ್ಲೆಗಳಿಂದ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಲು ನೂರಾರು ಮಕ್ಕಳು ಅಬ್ಬನಡ್ಕಕ್ಕೆ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಲವಾರು ಗಣತಿ ಗಣ್ಯರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಮೆರವಣಿಗೆ, ಅದ್ದೂರಿಯ ಉದ್ಘಾಟನಾ ಸಮಾರಂಭ, ಭಜನಾ ಕಾರ್ಯಕ್ರಮ, ಚೆಂಡೆವಾದನ, ಯಕ್ಷಗಾನ ನೃತ್ಯ, ಜಾನಪದ ನೃತ್ಯ, ಭರತನಾಟ್ಯ, ಶಾಸ್ತ್ರೀಯ ನೃತ್ಯ, ಸಂವಾದ, ಫಿಲ್ಮಿ ಡ್ಯಾನ್ಸ್, ಫ್ಯಾಶನ್ ಶೋ, ಯೋಗ ನೃತ್ಯ, ಸಂಗೀತ ಕಾರ್ಯಕ್ರಮ, ಭಕ್ತಿ ಗೀತೆ, ಭಾವಗೀತೆ, ಮಿಮಿಕ್ರಿ, ಕೊಳಲುವಾದನ, ಶಾಸ್ತ್ರೀಯ ಸಂಗೀತ ಮುಂತಾದ ಹಲವು ವಿಶಿಷ್ಟ ಪ್ರದರ್ಶನಗಳು ಈ ವೇದಿಕೆಯಲ್ಲಿ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಲಾಗಿದೆ.

