ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜನವರಿ 11 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಸೀತಮ್ಮ ಶಾಲೆಯ ಎದುರು ಇರುವ ರೋಟರಿ ಬಾಲಭವನದಲ್ಲಿ ಮಕರ ಸಂಕ್ರಾಂತಿ ರಾಜ್ಯ ಮಟ್ಟದ ಉಚಿತ ಕವಿಗೋಷ್ಠಿ ಉದ್ಘಾಟನೆ ಆಗಲಿದೆ ಎಂದು ಕಲಾಕುಂಚದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ತಿಳಿಸಿದ್ದಾರೆ.
ಈ ಕವಿಗೋಷ್ಠಿಯ ಉದ್ಘಾಟನೆಯನ್ನು ಖ್ಯಾತ ಹೋಮಿಯೋಪತಿ ವೈದ್ಯರು, ಕವಯತ್ರಿ, ಲೇಖಕಿ ಡಾ|| ಆರತಿ ಸುಂದರೇಶ್ ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಕವಿ, ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷರಾದ ಸುನಿತಾ ಮೃತ್ಯುಂಜಯ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್, ಯುವ ಸಾಹಿತಿ, ಕವಯತ್ರಿ, ಶಿಕ್ಷಕಿ ಮಂಜುಳಾ ಪ್ರಸಾದ್ ಬಂಗೇರ ಆಗಮಿಸಲಿದ್ದಾರೆ.
ಹಿರಿಯ, ಕಿರಿಯ ಕವಿ, ಕವಯತ್ರಿಯರು, ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಮಕರ ಸಂಕ್ರಾಂತಿಯ ರಾಜ್ಯ ಮಟ್ಟದ ಉಚಿತ ಕವಿಗೋಷ್ಠಿಯನ್ನು ಯಶಸ್ವಿಗೊಳಿಸಬೇಕಾಗಿ ರೋಟರಿ ಕ್ಲಬ್‌ನ ಕಾರ್ಯದರ್ಶಿ ಆರ್.ಟಿ. ಮೃತ್ಯುಂಜಯ ವಿನಂತಿಸಿದ್ದಾರೆ.

