Thursday, May 1, 2025
HomeUncategorizedಮಂಗಳೂರಿನಲ್ಲಿ ನಡೆದ ‘ವಿಶ್ವ ಣಮೋಕಾರ ಮಹಾಮಂತ್ರ ದಿನದ ವಿಶೇಷ ಅಂಚೆ ಚೀಟಿ ಬಿಡುಗಡೆ ಸಮಾರಂಭ’ದಂದು ಮೂಡುಬಿದಿರೆಯ...

ಮಂಗಳೂರಿನಲ್ಲಿ ನಡೆದ ‘ವಿಶ್ವ ಣಮೋಕಾರ ಮಹಾಮಂತ್ರ ದಿನದ ವಿಶೇಷ ಅಂಚೆ ಚೀಟಿ ಬಿಡುಗಡೆ ಸಮಾರಂಭ’ದಂದು ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ವಿಶೇಷ ಗೌರವ

ಜೈನಧರ್ಮಿಯರ ಪವಿತ್ರಮಂತ್ರ ‘ಣಮೋಕಾರ ಮಹಾಮಂತ್ರ’. ದಿ.೯.೪.೨೦೨೫ ರಂದು ವಿಶ್ವಶಾಂತಿಗಾಗಿ ‘ವಿಶ್ವ ಣಮೋಕಾರ ಮಹಾಮಂತ್ರ ದಿನ’ ಎಂದು ಘೋಷಿಸಲಾಗಿತ್ತು. ಆ ದಿನ ಬೆಳಿಗ್ಗೆ ಜೈನಧರ್ಮಿಯರು ಮಾತ್ರವಲ್ಲದೆ ಇತರ ಧರ್ಮಿಯರೂ ‘ಪಂಚನಮಸ್ಕಾರ ಮಹಾಮಂತ್ರ’ವನ್ನು ಸಾಮೂಹಿಕವಾಗಿ ಪಠಿಸಿದರು. ಈ ದಿನದ ಸವಿನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯವರು ‘Sಠಿeಛಿಚಿiಟ Piಛಿಣuಡಿe Posಣ ಅಚಿಡಿಜ’ ಅನ್ನು ದೇಶದ ವಿವಿಧ ವಲಯಗಳಲ್ಲಿ ಬಿಡುಗಡೆ ಮಾಡಿದರು. ನವದೆಹಲಿಯಲ್ಲಿ ನಡೆದ ಸಮಾರಂಭವೊAದರಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಈ ವಿಶೇಷ ಅಂಚೆ ಕಾರ್ಡ್ನ್ನು ಬಿಡುಗಡೆ ಮಾಡಿದರು. ಮಂಗಳೂರಿನ ಪ್ರಧಾನ ಅಂಚೆ ಕಛೇರಿಯಲ್ಲಿ ನಡೆದ ಸಮಾರಂಭಕ್ಕೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಹಾಗೂ ಶ್ರೀಮತಿ ರಶ್ಮಿತಾ ಜೈನ್ ಅವರನ್ನು ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಿ ಗೌರವಿಸಲಾಗಿತ್ತು. ಅವರ ಅನುಪಸ್ಥಿತಿಯಲ್ಲಿ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ ಅಕ್ಷಯ್ ಜೈನ್ ಹಾಗೂ ಶ್ರೀ ಸ್ವರೂಪ್ ಜೈನ್ ಅವರು ಭಾಗವಹಿಸಿದ್ದರು. ಅಂದು ಬಿಡುಗಡೆಗೊಂಡ ಆ ವಿಶೇಷ ಅಲ್ಪಮ್‌ನ್ನು ಅವರೀರ್ವರೂ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ದಿ. ೧೦.೦೪.೨೦೨೫ ರಂದು ನಡೆದ ‘ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಜನ್ಮಕಲ್ಯಾಣ ಮಹೋತ್ಸವ’ದ ಕರ‍್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರೂ ಮಾಜಿ ಶಾಸಕರೂ ಆದ ಶ್ರೀ ಕೆ.ಅಭಯಚಂದ್ರ ಜೈನ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಹಾಗೂ ಕರ‍್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ಹಸ್ತಾಂತಿರಿಸಿದರು.

RELATED ARTICLES
- Advertisment -
Google search engine

Most Popular