ಪುತ್ತೂರು ತಾಲೂಕು ಮಾಡ್ನೂರು ಗ್ರಾಮದಲ್ಲಿಯ ಮಳೆ ಮಾಪಕದ ಸ್ಥಿತಿ

0
46

ಚಿತ್ರ ಮತ್ತು ಮಾಹಿತಿ ಸಹಕಾರ :- ಯಲ್. ಬಿ. ಪೆರ್ನಾಜೆ, ಮದ್ಲ, ಕಾವು.

ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಗ್ರಾಮಧಿಕಾರಿಯವರ ಕಚೇರಿಯ ಮೇಲ್ಚಾವಣಿ (ನಿರ್ಮಾಣದ ಹಂತದ )ಯಲ್ಲಿ ಅಳವಡಿಸಿದ ಮಳೆ ಮಾಪಕದ ಚಿತ್ರವಿದು. ಒಂದು ಸಿಲಿಂಡರಾಕಾರದ ನೀರು ತುಂಬುವ ಪಾತ್ರ, ಅದರೊಳಗೊಂದು ಮಳೆನೀರು ಇಳಿಯಲು ಆಲಿಕೆಯಿದೆ.ಒಂದು ಬದಿಯಲ್ಲಿ ಒಂದು ಸೋಲಾರ್ ಪ್ಯಾನಲ್ ಇದೆ. ಮತ್ತೊಂದು ಬದಿಯಲ್ಲಿ ಒಂದು ಪೆಟ್ಟಿಗೆ. ಆ ಪೆಟ್ಟಿಗೆಗೆ ಒಂದು ತುಕ್ಕು ಹಿಡಿದ ಬೀಗ. ಇವಿಷ್ಟು ಮಳೆ ಮಾಪಕದ ಭಾಗಗಳು. ಇದರ ಮೂಲಕ ಸುರಿದ ಮಳೆಯ ಲೆಕ್ಕವನ್ನು ಹೇಗೆ ಸ್ವೀಕರಿಸುತ್ತಾರೋ ಯಾರಿಗೂ ಗೊತ್ತಿಲ್ಲ. ಈ ಯಂತ್ರವನ್ನು ಅಳವಡಿಸಿದ್ದು ಯಾರು, ಇದರ ಉಸ್ತುವಾರಿ ಯಾರಿಗೆ ಎಂಬ ಮಾಹಿತಿ ಯಾರಿಗೂ ಇಲ್ಲ. ಮೇಲ್ನೋಟಕ್ಕೆ ಕಾಣುವಾಗ ಇದು ಕೇವಲ ಕಣ್ ಕಟ್ಟಿಗಾಗಿ ಸ್ಥಾಪಿಸಿದ ಯಂತ್ರವೆಂದು ಗೋಚರವಾಗುತ್ತಿದೆ. ಇದರ ಆಧಾರದಲ್ಲಿ ಹಿಂದಿನ ಸಾಲಿನ ಮಳೆ ಲೆಕ್ಕ ದಾಖಲಿಸಿದ ಪ್ರಕಾರ ಈ ಗ್ರಾಮದ ರೈತರಿಗೆ ಹವಾಮಾನಾಧಾರಿತ ಬೆಳೆ ವಿಮಾ ಪರಿಹಾರ ಅತೀ ಕಡಿಮೆ ದೊರಕಿದೆ. ಇದಕ್ಕಾರನ್ನು ಹೊಣೆ ಮಾಡಲಿ ಎಂದು ಫಲಾನುಭವಿ ರೈತರು ಚಿಂತಿಸುತ್ತಿರುವರು. ಜನ ಪ್ರತಿನಿಧಿಗಳು ತಕ್ಷಣ ಇದನ್ನು ಸಮರ್ಪಕ ಮಾಪಕವಾಗಿಸುವತ್ತ ಗಮನಹರಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ.

LEAVE A REPLY

Please enter your comment!
Please enter your name here