ಮಾದಕ ದ್ರವ್ಯಗಳಿಂದ ದೂರವಿರಿ-ಡಾ. ಚೂಂತಾರು

0
75

ಪರಿವರ್ತನಾ ಟ್ರಸ್ಟ್ ಇದರ ವತಿಯಿಂದ ನಡೆಯುವ ವ್ಯಸನ ಮುಕ್ತ ಕರ್ನಾಟಕ ಅಭಿಯಾನ ಮಂಗಳೂರು ಚರಣ ಇದರ ಜನಜಾಗೃತಿ ಕಾರ್ಯಕ್ರಮವು ಶ್ರೀ ಭಾರತಿ ಸಮೂಹ ಸಂಸ್ಥೆ, ಪದವು- ನಂತೂರು ಇಲ್ಲಿ ದಿನಾಂಕ 29-12-2025 ಶುಕ್ರವಾರ ಬೆಳಗ್ಗೆ ನಡೆಯಿತು.

ಕಾರ್ಯಕ್ರಮದಲ್ಲಿ ಡಾ.‌ ಮುರಲೀ ಮೋಹನ್ ಚೂಂತಾರ್ ಇವರು‌ ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದರು. ಮಾದಕ ದ್ರವ್ಯಗಳ ಚಟದಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು. ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು. ವಿದ್ಯಾರ್ಥಿಗಳೇ ದೇಶದ ಆಸ್ತಿ. ಮಾದಕ ದ್ರವ್ಯ ಬಳಸಿದಲ್ಲಿ ವಿದ್ಯಾರ್ಥ್ಯಿಗಳು ಸಮಾಜ ಮತ್ತು ದೇಶಕ್ಕೆ ಹೊರೆಯಾಗುತ್ತಾರೆ. ಮಾದಕ ದ್ರವ್ಯಗಳಿಂದ ದೂರವಿದ್ದು ಸ್ವಸ್ಥ ಸಮಾಜ ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲ ಸಂದೀಪ್ ಆಚಾರ್ಯ, ಸಂಪನ್ಮೂಲ ವ್ಯಕ್ತಿ ಸಂದೇಶ್, ಸಂಚಾಲಕ ಹೇಮಂತ್ ಉಪಸ್ಥಿತರಿದ್ದರು.ಸುಮಾರು 150 ಮಂದಿ ವಿದ್ಯಾರ್ಥಿಗಳು ಬಾಗವಹಿಸಿದ್ದರು.

LEAVE A REPLY

Please enter your comment!
Please enter your name here