ಬ್ರಹ್ಮಾವರ : ಇಂದು ಸ್ವ- ಉದ್ಯೋಗದ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸಲು ರುಡ್‌ಸೆಟ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ಹಾಗಾಗಿ ಮುಂದಿನ ಬದುಕಿನಲ್ಲಿ ಉಜ್ವಲವಾಗಲು ಕೌಶಲ್ಯವನ್ನು ಕಲಿತು ನಿಮ್ಮ ದುಡಿಮೆಯನ್ನು ನಂಬಿ ಬದುಕನ್ನು ಕಟ್ಟಿಕೊಳ್ಳಿ ಎಂದು ಶ್ರೀಮತಿ. ಎಮ್. ಮಾಧವಿ, ಉಪ-ಮಹಾಪ್ರಭಂದಕರು, ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್, ಉಡುಪಿ ಅಭಿಪ್ರಾಯಪಟ್ಟರು.
ಅವರು ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ನಡೆಯುವ 10 ದಿನಗಳ ಕಾಲ ನಡೆಯುವ “ಪಿ.ಎಂ.ಈ.ಜಿ.ಪಿ ಫಲಾನುಭವಿಗಳಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ” ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಜ್ಯೋತಿ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ, ಶಿಭಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ಉದ್ದಿಮೆಯನ್ನು ಮಾಡಲು ಕೌಶಲ್ಯಗಳ ಕೊರತೆ ತುಂಬಾ ಇದೆ.
ಆ ನಿಟ್ಟಿನಲ್ಲಿ ಅದನ್ನು ನಿಗಿಸಲು ಕೆನರಾ ಬ್ಯಾಂಕ್ ಮತ್ತು ಧರ್ಮಸ್ಥಳ ಸಂಸ್ಥೆಯ ಸಹಯೋಗದಲ್ಲಿ ಈ ರುಡ್‌ಸೆಟ್ ಸಂಸ್ಥೆಗಳು ಭಾರತದಾದ್ಯಂತ ಕಾರ್ಯ ನಿರ್ವಹಿಸುತ್ತಿವೆ. ಹಾಗಾಗಿ ನಿಮ್ಮ ಉದ್ಯಮದಲ್ಲಿ ತಾಳ್ಮೆಯಿಂದ ಶಿಸ್ತು ಮತ್ತು ಸಂಯಮವಿದ್ದರೆ ಉದ್ಯಮದಲ್ಲಿ ಯಶಸ್ಸು ಸಾಧ್ಯ. ಹಾಗಾಗಿ ಶೀಸ್ತುಭದ್ದವಾಗಿ ಬದುಕನ್ನು ರೂಪಿಸಿಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಮ್, ಬದುಕಿನಲ್ಲಿ ಕೌಶಲ್ಯಗಳಿದ್ದರೆ ನಾವು ಎಲ್ಲಿ ಬೇಕಾದರೂ ಜೀವನ ಕಟ್ಟಿಕೊಳ್ಳಬಹುದು. ಹಾಗಾಗಿ ಈ ತರಬೇತಿಯನ್ನು ತಾವೇಲ್ಲರೂ ಸದುಪಯೋಗಪಡಿಸಿಕೊಂಡು ನಿಮ್ಮ ಉದ್ಯಮದಲ್ಲಿ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.
ಕಛೇರಿ ಸಹಾಯಕರಾದ ಶಾಂತಪ್ಪ ನಿರೂಪಿಸಿ, ಹಿರಿಯ ಕಛೇರಿ ಸಹಾಯಕರಾದ ರವಿ ಸ್ವಾಗತಿಸಿ ವಂದಿಸಿದರು.

