48 ನೇ ಕಣ್ಣೂರು ಗಣೇಶೋತ್ಸವ ದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಯಶಸ್ವಿ

0
22

ಮಂಗಳೂರು : ಶ್ರೀ ಗಣೇಶೋತ್ಸವ ಸಮಿತಿ ರಿ. ಕಣ್ಣೂರು, ಮಂಗಳೂರು ಇದರ 48 ನೇ ಕಣ್ಣೂರು ಗಣೇಶೋತ್ಸವ ದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ನಡೆಯಿತು. ದಿನಾಂಕ 14.09.2026 ರಿಂದ 16.09.2026 ರ ವರೆಗೆ ಕಣ್ಣೂರು ಗಣೇಶೋತ್ಸವವು ವಿಜೃಂಭಣೆಯಿಂದ ನಡೆಯಲಿರುವುದು.

ಅಧ್ಯಕ್ಷರಾದ ನಿತಿನ್ ಕಣ್ಣೂರು, ಗೌರವಧ್ಯಕ್ಷರಾದ ನಾಗೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಸುಧಾಕರ್ ಆಚಾರ್ಯ & ಸೀತಾರಾಮ ಗಟ್ಟಿ ಪ್ರಧಾನ ಕಾರ್ಯದರ್ಶಿಯಾದ ದೀಪಕ್, ಜೊತೆ ಕಾರ್ಯದರ್ಶಿ, ಅಮನ್ ಅಂಚನ್ & ಪ್ರತೀಕ್, ಕೋಶಾಧಿಕಾರಿಯಾದ ರಾಜೇಶ್ ಕುಲಾಲ್, ಕ್ರೀಡಾ ಕಾರ್ಯದರ್ಶಿ ಗಳಾದ ನಿಖಿತ್ ಕೊಟ್ಟಾರಿ & ಜೀವನ್ ಶೆಟ್ಟಿ , ಸಂಘಟನಾ ಕಾರ್ಯದರ್ಶಿ ಯಾದ ರಾಜೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ವಿವೇಕ್ ಸುವರ್ಣ, ಸುರೇಶ್ ಶೆಟ್ಟಿ, ಬಾಬು ಗಟ್ಟಿ ಹಾಗೂ ಯುವರಾಜ್, ಹಿರಿಯ ಸದಸ್ಯರಾದ ನಾರಾಯಣ ಅಂಚನ್ , ನೀಲಯ್ಯ ಕೋಟ್ಯಾನ್, ಸಂಜೀವ ಕೊಳ್ತಾಡಿ, ಉಮೇಶ್ ಕೊಳ್ತಾಡಿ, ದಿನೇಶ್ ಸುವರ್ಣ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.