ಯಶಸ್ವಿಯಾದ ಶ್ರೀ ಗಾಯತ್ರಿ ಪೂಜೆ, ಉಪಾಸನೆ

0
31


ದಾವಣಗೆರೆ: ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 25 ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಶೀಗೀ ಹುಣ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಸುಸಂಪನ್ನ ಗೊಂಡಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.
ಈ ಸಾಮೂಹಿಕ ಪೂಜೆಯಲ್ಲಿ ಪರಿವಾರದ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ದಂಪತಿಗಳ ಈ ಪೂಜಾ ಸೇವೆಯಲ್ಲಿ ಪರಿವಾರದ ಸಂಚಾಲಕರಾದ ಆರ್.ಎಂ.ಸತೀಶ್, ಸಮಿತಿ ಸದಸ್ಯರಾದ ಸಿ.ಹೆಚ್. ಹರಿಸುಮಂತ್, ಪ್ರೇಮಾ ಮಹೇಶ್ವರಯ್ಯ, ಶಿವಲೀಲಾ ಮಹಾದೇವಪ್ಪ, ವಸಂತಿ ಮಂಜುನಾಥ್, ಕೆ.ಸಿ.ಉಮೇಶ್, ವಿ. ಕೃಷ್ಣಮೂರ್ತಿ, ವಿಕ್ರಂಜೈನ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here