ದಾವಣಗೆರೆ : ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 25 ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಹೋಳಿ ಹುಣ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ಶೆಣೈ ತಿಳಿಸಿದ್ದಾರೆ.
ಈ ತಿಂಗಳ ಹುಣ್ಣಿಮೆಯ ಪೂಜಾ ಸೇವೆಯನ್ನು ಪರಿವಾರದ ಖಜಾಂಚಿ ಪುರುಷೋತ್ತಮ ಪಟೇಲ್ ಮತ್ತು ಕುಟುಂಬದವರು ಈ ತಿಂಗಳ ಪೂಜಾ ಸೇವೆಯನ್ನು ಸಲ್ಲಿಸಿದ್ದು ಪರಿವಾರದ ಅಧ್ಯಕ್ಷರಾದ ಡಾ|| ರಮೇಶ್ ಪಾಟೀಲ್, ಸಂಚಾಲಕ ಭಾವನ್ನಾರಾಯಣ ಸಮಿತಿ ಸದಸ್ಯರಾದ ಸತೀಶ್ ಆರ್.ಎಂ.,ವಿ.ಕೃಷ್ಣಮೂರ್ತಿ, ಕೆ.ಸಿ.ಉಮೇಶ್, ಸತ್ಯನಾರಾಯಣಮೂರ್ತಿ, ಚನ್ನಬಸವ ಶೀಲವಂತ್, ವಾಸುದೇವ ಲಕ್ಮ್ಷಣ್ ರಾಯ್ಕರ್, ಲೋಹಿತಾಶ್ವ ಮುಂತಾದವರು ಉಪಸ್ಥಿತರಿದ್ದರು.

