ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ನಡೆಸಿ ಆರೋಪಿಗಳು ಕಾರಿನಲ್ಲಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿದ್ದ ಇಬ್ಬರು ಬುರ್ಖಾಧಾರಿ ಮಹಿಳೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರಂಭಿಕ ವಿಚಾರಣೆ ವೇಳೆ ಘಟನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಪ್ರಕರಣದ ಎರಡನೇ ಆರೋಪಿ ನಿಯಾಜ್‌ನ ಚಿಕ್ಕಮ್ಮ ಮತ್ತು ಅವರ ಮಗಳು ಎಂದು ತಿಳಿದು ಬಂದಿದೆ. ಬಜಪೆಯ ಫ್ಲ್ಯಾಟ್‌ನಲ್ಲಿರುವ ಸಂಬಂಧಿಯೊಬ್ಬರ ಆರೋಗ್ಯ ವಿಚಾರಣೆಗೆ ಇವರು ಬಂದಿದ್ದರು. ಅಲ್ಲಿಂದ ಮನೆಗೆ ವಾಪಸು ಹೋಗುವಾಗ ಘಟನಾ ಸ್ಥಳದ ಪಕ್ಕದ ಹೊಟೇಲ್‌ನಿಂದ ಪಾರ್ಸೆಲ್ ತೆಗೆದುಕೊಂಡು ಹೊರ ಬಂದರು. ಆಗ ನಿಯಾಜ್ ರಸ್ತೆಯಲ್ಲಿ ಓಡುವುದನ್ನು ಕಂಡರು. ಘಟನಾ ಸ್ಥಳದಲ್ಲಿ ಅಪಘಾತ ಸನ್ನಿವೇಶವಿದ್ದು, ನಿಯಾಜ್ ಓಡುತ್ತಿರುವುದು ನೋಡಿ ಆತನಿದ್ದಲ್ಲಿಗೆ ಹೋಗಿರುವುದಾಗಿ ವಿಚಾರಣೆ ವೇಳೆ ಮಹಿಳೆಯರು ವಿವರಿಸಿದ್ದಾರೆ ಎನ್ನಲಾಗಿದೆ.