ಜಾನಪದ ಪ್ರಪಂಚ ಪ್ರಶಸ್ತಿಗೆ ಭಾಜನರಾದ ಸುಮಲತಾ ಬಜಗೋಳಿ

0
3

ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಕನ್ನಡ ಜಾನಪದ ಪರಿಷತ್,ಜಿಲ್ಲಾ‌ ಮಹಿಳಾ ಘಟಕ ಚಿಕ್ಕಮಗಳೂರು , ತಾಲ್ಲುಕು ಮಹಿಳಾ ಘಟಕ ಅಜ್ಜಂಪುರ ಇವರ ಸಹಯೋಗದಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಜಾನಪದ ಸಮ್ಮೇಳನ-2026 ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬಜಗೋಳಿಯ ಕು. ಸುಮಲತಾ ಬಜಗೋಳಿ ಕೊಪ್ಪ ರವರಿಗೆ ಕಂಠದಾನ ಕಲಾವಿದೆ ಎಂಬ ಜಾನಪದ ಪ್ರಪಂಚ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ನಿರೂಪಣೆ,ಧ್ವನಿ ಸುರುಳಿ, ಮೂರು ಬಾರಿ ಹಿಮಾಲಯ ಪರ್ವತಾರೋಹಣ ಚಾರಣ,ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸುಮಲತಾ ಬಜಗೋಳಿ ರವರು ಕೊಪ್ಪ ತಾಲ್ಲುಕು ಪಂಚಾಯಿತಿ ಕಾರ್ಯಾಲಯದಲ್ಲಿ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here