ಸುರತ್ಕಲ್: ಚಲಿಸುವ ರೈಲಿನಿಂದ ಕಾಲು ಜಾರಿ ಬೀಳಲು ಸಿದ್ಧನಾಗಿದ್ದ ವೃದ್ಧನ ರಕ್ಷಣೆ

0
218

ಸುರತ್ಕಲ್: ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ರೈಲು ಹಳಿಯ ಮೇಲೆ ಬೀಳಲು ಸಿದ್ಧನಾಗಿದ್ದ ವೃದ್ಧ ಪ್ರಯಾಣಿಕರನ್ನು ಕರ್ತವ್ಯ ನಿರತ ಪಾಯಿಂಟ್ಸ್‌ಮನ್ ಜಗದೀಶ್ ಮತ್ತು ಸ್ಟೇಷನ್ ಮಾಸ್ಟರ್ ಮನೋಜ್ ಶೆಟ್ಟಿ ರಕ್ಷಿಸಿದ್ದಾರೆ.
ರೈಲು ಸಂಖ್ಯೆ 12620 ಹಾದುಹೋಗುವಾಗ, ಚಲಿಸುವ ರೈಲಿನಿಂದ ಬೀಳಲು ಸಿದ್ಧನಾಗಿದ್ದ ಒಬ್ಬ ವಯಸ್ಸಾದ ಪ್ರಯಾಣಿಕನನ್ನು ಎಚ್ಚರದಿಂದಿದ್ದ ಸ್ಟೇಷನ್ ಮಾಸ್ಟರ್ ಮನೋಜ್ ಶೆಟ್ಟಿ ಮತ್ತು ಸುರತ್ಕಲ್ ನಿಲ್ದಾಣದ ಪಾಯಿಂಟ್ಸ್ ಮ್ಯಾನ್ ಜಗದೀಶ್ ರವರು ರಕ್ಷಿಸಿದರು.
ರೈಲ್ವೇ ಸಿಎಂಡಿ ಸಂತೋಷ್ ಕುಮಾರ್ ಝಾ ರವರು ಇಬ್ಬರಿಗೂ ಸ್ಥಳದಲ್ಲೇ ತಲಾ 5000/- ರೂ.ಗಳ ಬಹುಮಾನವನ್ನು ಮಂಜೂರು ಮಾಡಿದ್ದಾರೆ.

LEAVE A REPLY

Please enter your comment!
Please enter your name here