ಸ್ವರ್ಣನೂಪುರ ಯಕ್ಷಗಾನ ಮಂಡಳಿಯ 4ನೇ ವಾರ್ಷಿಕೋತ್ಸವ “ಯಕ್ಷ ಕಿನ್ನರ ಸಂಭ್ರಮ-2026”

0
6

-ಮಂದಾರ ರಾಜೇಶ್

​ಕುಂದಾಪುರದ ಸ್ವರ್ಣನೂಪುರ ಯಕ್ಷಗಾನ ಮಂಡಳಿಯ 4ನೇ ವರ್ಷದ ವಾರ್ಷಿಕೋತ್ಸವ “ಯಕ್ಷ ಕಿನ್ನರ ಸಂಭ್ರಮ-2026” (‘ರಂಗ ತಾರ ಚಂದ್ರಮ’) ಕಾರ್ಯಕ್ರಮವು ಹಂಗಳೂರಿನ ಶ್ರೀ ಶನೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಅಕ್ಟೋಬರ್ 4 ರಂದು ಅದ್ದೂರಿಯಾಗಿ ಜರುಗಿತು.

ತುಳುನಾಡ ರಕ್ಷಣಾ ವೇದಿಕೆ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶರತ್ ರಾಜ್ ಆರೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸೂಪರ್ ಗ್ರೇಟ್ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಕೆ. ಆರ್. ನಾಯಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

​ಗಣ್ಯರ ಉಪಸ್ಥಿತಿ

ದಿಕ್ಸೂಚಿ ಭಾಷಣವನ್ನು ಮುಖ್ಯಶಿಕ್ಷಕ ಅಬ್ದುಲ್ ರವೂಪ್ ನೆರವೇರಿಸಿದರು.

ವೇದಿಕೆಯಲ್ಲಿ ಎಸ್. ಸತೀಶ್ ಕುಮಾರ್, ಅಣ್ಣಯ್ಯ ಪೂಜಾರಿ, ನಾರಾಯಣ ಜಿ. ಗುನಗ, ಪಲ್ಲವಿಮಯ್ಯ ಹಾಲಾಡಿ, ಚಂದ್ರಹಾಸ ಜಿ. ಗುನಗ ಹಾಗೂ ಗಣೇಶ ಗುನಗ ಉಪಸ್ಥಿತರಿದ್ದರು.

​ಸನ್ಮಾನ ಮತ್ತು ಪುರಸ್ಕಾರಗಳು

​ ಕೃಷ್ಣಾನಂದ್ ಶೆಣೈ ದಂಪತಿಗೆ “ಗೌರವ ಸನ್ಮಾನ”

​ ಶಶಾಂಕ್ ಪಟೇಲ್ ದಂಪತಿಗೆ “ಸ್ವರ್ಣ ನೂಪುರ ಪ್ರಶಸ್ತಿ”

​ವಿಘ್ನೇಶ್ ದೇವಾಡಿಗ ದಂಪತಿಗೆ “ಗುರುವಂದನೆ” ಸಲ್ಲಿಸಲಾಯಿತು.

​ಪ್ರತಿಭಾ ಪುರಸ್ಕಾರ

ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಕು. ಸಾನ್ವಿ ಶೆಟ್ಟಿ, ಕು. ದೀಕ್ಷಾ ಪೂಜಾರಿ ಹಾಗೂ ಕು. ವೈಷ್ಣವಿ ಶೆಟ್ಟಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

​ಯಕ್ಷಗಾನ ಪ್ರಸ್ತುತಿ

ಸಭಾ ಕಾರ್ಯಕ್ರಮದ ನಂತರ ಸ್ವರ್ಣ ನೂಪುರ ಕೇಂದ್ರದ ವಿದ್ಯಾರ್ಥಿಗಳಿಂದ “ಹರಿಚಕ್ರ ವೈಭವಂ” ಹಾಗೂ “ಹರಶಕ್ತಿ ಕಲ್ಯಾಣ” ಎಂಬ ಎರಡು ಆಕರ್ಷಕ ಪೌರಾಣಿಕ ಯಕ್ಷಗಾನ ಪ್ರಸಂಗಗಳು ರಂಗಪ್ರಸ್ತುತಿಗೊಂಡು ರಸಿಕರ ಮನಸೂರೆಗೊಂಡವು.