ಮಂಗಳೂರು: ನ 21 ಮಿಲಾಗ್ರಿಸ್ ಕಾಲೇಜು, ಮಂಗಳೂರು ಇಲ್ಲಿ ಐಕ್ಯೂಎಸಿ ಹಾಗೂ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಅಂತರತರಗತಿ ಪ್ರತಿಭಾ ಪ್ರದರ್ಶನ ಪ್ರತಿಭಾದಿನಾಚರಣೆಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಅಲ್ವಿನ್ ಸೆರಾವೋ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.
ಕಾರ್ಯಕ್ರಮಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ ಜೈಸನ್ ಸಿಕ್ವೇರಾ ಹಾಗೂ ಜ್ಞಾನ ಕಲಾ ಸಂಸ್ಥೆಯ ಸ್ಥಾಪಕರಾದ ಸುಷ್ಮಾ ಮನೋಜ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಶ್ರೀಮತಿ ಚೇತನಾ ಕೆ, ವಿದ್ಯಾರ್ಥಿ ಕ್ಷೇಮಪಾಲಕಿ ಶ್ರೀಮತಿ ಟ್ರೆಸ್ಸಿ ಪಿಂಟೋ, ಸಾಂಸ್ಕೃತಿಕ ಸಂಘದ ಸಂಯೋಜಕಿ ಸಮಿತಾ ಹಾಗೂ ಇನ್ನಿತರ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳಿಂದ ಗಾಯನ, ನೃತ್ಯ, ನಾಟಕ, ಹಾಸ್ಯಪ್ರಸ್ತುತಿ ಸೇರಿದಂತೆ ವೈವಿಧ್ಯಮಯ ಕಲಾತ್ಮಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

