ಭಾರತ,03 ಫೆಬ್ರವರಿ 2026: ಭಾರತದ ನೇಮಕಾತಿ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ, ಆದರೆ ಸೂಕ್ತ ಪ್ರತಿಭೆಗಳನ್ನು ಹುಡುಕುವುದು ಕಷ್ಟಕರವಾಗುತ್ತಿದೆ. ಲಿಂಕ್ಡ್ ಇನ್ ನ ಹೊಸ ಸಂಶೋಧನೆಯು, ನೇಮಕಾತಿ ಚಟುವಟಿಕೆಯು ಕೋವಿಡ್ ಪೂರ್ವ ಮಟ್ಟಕ್ಕಿಂತ 40% ರಷ್ಟು ಹೆಚ್ಚಿದ್ದರೂ ಸಹ, 74% ನೇಮಕಾತಿದಾರರು ಈಗ ಅರ್ಹ ಅಭ್ಯರ್ಥಿಗಳನ್ನು ಹುಡುಕಲು ಹೆಣಗಾಡುತ್ತಿದ್ದಾರೆ ಎಂದು ತೋರಿಸುತ್ತದೆ.
ನೇಮಕಾತಿದಾರರು ಅರ್ಜಿಗಳ ಪ್ರಮಾಣ ಮತ್ತು ಗುಣಮಟ್ಟದ ನಡುವೆ ಅಸಮತೋಲನವನ್ನು ಎದುರಿಸುತ್ತಿರುವುದೇ ಇದಕ್ಕೆ ಕಾರಣ. ನೇಮಕಾತಿ ಹೆಚ್ಚು ಕಷ್ಟಕರವಾಗಿದೆ ಎಂದು ಹೇಳುವವರ ಪೈಕಿ, ಅರ್ಧಕ್ಕಿಂತ ಹೆಚ್ಚು ಮಂದಿ ಎಐನಿಂದ ಸಿದ್ಧಪಡಿಸಲಾದ ಅರ್ಜಿಗಳ ಹೆಚ್ಚಳವನ್ನು (53%) ತೋರಿಸಿದರೆ, ಹಲವರು ಬೇಡಿಕೆ ಇರುವ ಕೌಶಲ್ಯಗಳ ಕೊರತೆಯನ್ನು (47%) ಉಲ್ಲೇಖಿಸಿದ್ದಾರೆ. ಸುಮಾರು ಅರ್ಧದಷ್ಟು ಮಂದಿ ನಿಜವಾದ ಅರ್ಜಿಗಳನ್ನು ಕಳಪೆ ಗುಣಮಟ್ಟದ ಅಥವಾ ದಾರಿ ತಪ್ಪಿಸುವ ಅರ್ಜಿಗಳಿಂದ ಬೇರ್ಪಡಿಸುವುದು ಈ ಪ್ರಕ್ರಿಯೆಯಲ್ಲಿ ಅಡಚಣೆಯನ್ನು ಉಂಟುಮಾಡುತ್ತಿದೆ (48%) ಎಂದು ಹೇಳಿದ್ದಾರೆ.
ಇದರ ಫಲಿತಾಂಶವಾಗಿ ಕಾರ್ಮಿಕ ಮಾರುಕಟ್ಟೆಯು ಹೆಚ್ಚು ಉದ್ಯೋಕಾಂಕ್ಷಿಗಳಿಂದ ಮತ್ತು ಸ್ಪರ್ಧಾತ್ಮಕತೆಯಿಂದ ಕೂಡಿದೆ. ಭಾರತದಲ್ಲಿ ಪ್ರತೀ ಮುಕ್ತ ಉದ್ಯೋಗಾವಕಾಶಕ್ಕೆ ಬರುವ ಅರ್ಜಿಗಳ ಸಂಖ್ಯೆಯು 2022 ಕ್ಕೆ ಹೋಲಿಸಿದರೆ ಎರಡರಷ್ಟು ಹೆಚ್ಚಾಗಿದೆ ಎಂದು ಲಿಂಕ್ಡ್ ಇನ್ ಮಾಹಿತಿ ತೋರಿಸುತ್ತದೆ. ಜೊತೆಗೆ, 72% ವೃತ್ತಿಪರರು ತಾವು 2026 ರಲ್ಲಿ ಸಕ್ರಿಯವಾಗಿ ಕೆಲಸ ಹುಡುಕುತ್ತಿರುವುದಾಗಿ ಹೇಳಿಕೊಂಡರೆ, 85% ಮಂದಿ ಈ ಪ್ರಕ್ರಿಯೆಯನ್ನು ಎದುರಿಸಲು ತಾವು ಸಿದ್ಧರಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ನೇಮಕಾತಿದಾರರು ಸರಿಯಾದ ಕೌಶಲ್ಯಗಳನ್ನು ಗುರುತಿಸಲು, ವೇಗವಾಗಿ ನೇಮಿಸಿಕೊಳ್ಳಲು ಮತ್ತು ಅಭ್ಯರ್ಥಿಯ ಉದ್ಯೋಗ ಪಯಣವನ್ನು ಹೆಚ್ಚು ತೃಪ್ತಿಕರವಾಗಿಸಲು ಎಐ ಅನ್ನು ಬಳಸುತ್ತಿದ್ದಾರೆ.
ಈ ಒತ್ತಡಗಳ ನಡುವೆ, ನೇಮಕಾತಿದಾರರು ಎಐ ಅನ್ನು ಪರಿಹಾರದ ಒಂದು ಭಾಗವಾಗಿ ನೋಡುತ್ತಿದ್ದಾರೆ. ಈಗಾಗಲೇ ಇದನ್ನು ಬಳಸುತ್ತಿರುವವರಲ್ಲಿ 71% ಭಾರತೀಯರು, ಈ ಹಿಂದೆ ತಾವು ಗಮನಿಸದೇ ಇದ್ದ ಕೌಶಲ್ಯ ಹೊಂದಿರುವ ಸೂಕ್ತ ಅಭ್ಯರ್ಥಿಗಳನ್ನು ಪತ್ತೆಹಚ್ಚಲು ಎಐ ತಮಗೆ ಸಹಾಯ ಮಾಡಿದೆ ಎಂದು ಹೇಳುತ್ತಾರೆ ಮತ್ತು 80% ಮಂದಿ ಅಭ್ಯರ್ಥಿಯ ಕೌಶಲ್ಯಗಳ ಬಗ್ಗೆ ಒಳನೋಟ ಪಡೆಯುವುದನ್ನು ಎಐ ಸುಲಭಗೊಳಿಸಿದೆ ಎಂದು ತಿಳಿಸಿದ್ದಾರೆ. ಮುಕ್ಕಾಲು ಭಾಗಕ್ಕಿಂತ ಹೆಚ್ಚು (76%) ಮಂದಿ ಎಐ ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುತ್ತಿದೆ ಎಂದು ನಂಬಿದ್ದಾರೆ.
ಮುಂದಿನ ದಿನಗಳಲ್ಲಿ ಎಐ ಬಳಕೆ ಮತ್ತಷ್ಟು ಹೆಚ್ಚಾಗಲಿದೆ. ಭಾರತದ 10 ನೇಮಕಾತಿದಾರರಲ್ಲಿ ಸುಮಾರು 8 ಮಂದಿ ತಮ್ಮ ನೇಮಕಾತಿ ಗುರಿಗಳನ್ನು ತಲುಪಲು, ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಲು ಮತ್ತು ಉನ್ನತ ಪ್ರತಿಭೆಗಳನ್ನು ಹುಡುಕಲು ಎಐ ಬಳಕೆಯನ್ನು ಹೆಚ್ಚಿಸಲು ಯೋಜಿಸುತ್ತಿದ್ದಾರೆ. ಬಹುಪಾಲು ಮಂದಿ 2026ರಲ್ಲಿ ಸಂದರ್ಶನಕ್ಕೂ ಮುನ್ನ ಮಾಡುವ ಪ್ರಾಥಮಿಕ ತಪಾಸಣೆಗಾಗಿ ಎಐ ಬಳಕೆಯನ್ನು ಹೆಚ್ಚಿಸಲು ಯೋಜಿಸಿದ್ದಾರೆ. ಇದು ನೇಮಕಾತಿದಾರ ಮತ್ತು ಅಭ್ಯರ್ಥಿಯ ನಡುವೆ ಹೆಚ್ಚು ಮೌಲ್ಯಯುತವಾದ ಸಂಭಾಷಣೆಗಳಿಗೆ (83%), ವೇಗದ ನೇಮಕಾತಿಗೆ (83%) ಮತ್ತು ಅಭ್ಯರ್ಥಿಯ ಬಗ್ಗೆ ಉತ್ತಮ ಒಳನೋಟಗಳಿಗೆ (82%) ದಾರಿ ಮಾಡಿಕೊಡುತ್ತದೆ ಎಂದು ಅವರು ನಂಬಿದ್ದಾರೆ.
ಈ ಕುರಿತು ಮಾತನಾಡುವ ಲಿಂಕ್ಡ್ ಇನ್ ಟ್ಯಾಲೆಂಟ್ ಸೊಲ್ಯೂಷನ್ಸ್ ನ ಅಪಾಕ್ (ಎಪಿಎಸಿ) ಉಪಾಧ್ಯಕ್ಷರಾದ ರುಚೀ ಆನಂದ್ ಅವರು, “ನೇಮಕಾತಿ ಪ್ರಕ್ರಿಯೆಯಲ್ಲಿ ಕೇವಲ ಪದವಿಗಳು ಮತ್ತು ಹಿಂದಿನ ಹುದ್ದೆಗಳಿಗಿಂತ ಹೆಚ್ಚಾಗಿ, ಬೇಡಿಕೆಯ ಕೌಶಲ್ಯ ಮತ್ತು ಸಾಮರ್ಥ್ಯಕ್ಕೆ ಆದ್ಯತೆ ನೀಡುತಿರುವ ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ. ಎಐ ಇಲ್ಲದೆ ಈ ಬದಲಾವಣೆಯನ್ನು ದೊಡ್ಡ ಮಟ್ಟದಲ್ಲಿ ಕಾರ್ಯಗತಗೊಳಿಸುವುದು ಕಷ್ಟ. ಜವಾಬ್ದಾರಿಯುತವಾಗಿ ಬಳಸಿದಾಗ ಎಐ ನೇಮಕಾತಿದಾರರಿಗೆ ಸರಿಯಾದ ಕೌಶಲ್ಯಗಳನ್ನು ಮೊದಲೇ ಪತ್ತೆಹಚ್ಚಲು, ತಪಾಸಣೆ ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ಹೆಚ್ಚು ಸ್ಥಿರವಾದ ಹಾಗೂ ನ್ಯಾಯೋಚಿತ ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಲು ಸಹಾಯ ಮಾಡುತ್ತದೆ. ಲಿಂಕ್ಡ್ ಇನ್ ನಲ್ಲಿ ನಮ್ಮ ಆದ್ಯತೆಯೆಂದರೆ ‘ಹೈರಿಂಗ್ ಅಸಿಸ್ಟೆಂಟ್’ ನಂತಹ ಎಐ ಪರಿಕರಗಳನ್ನು ನಿರ್ಮಿಸುವುದು. ಇವು ನೇಮಕಾತಿ ನಿರ್ಧಾರ ತೆಗೆದುಕೊಳ್ಳಲು ಬೆಂಬಲ ನೀಡುವ ಅಂಶವಾಗಿ ಕೆಲಸ ಮಾಡುತ್ತವೆ, ಇದರಿಂದಾಗಿ ನೇಮಕಾತಿದಾರರು ಗುಣಮಟ್ಟ ಅಥವಾ ಅಭ್ಯರ್ಥಿಯ ಅನುಭವದಲ್ಲಿ ರಾಜಿ ಮಾಡಿಕೊಳ್ಳದೆ ಸರಿಯಾದ ಪ್ರತಿಭೆಯನ್ನು ಹೆಚ್ಚು ವೇಗವಾಗಿ ಮತ್ತು ಆತ್ಮವಿಶ್ವಾಸದಿಂದ ಹುಡುಕಬಹುದು” ಎಂದು ಹೇಳಿದರು.
ನೇಮಕಾತಿದಾರ ಮತ್ತು ಉದ್ಯೋಗಾಕಾಂಕ್ಷಿಯ ಸಂಬಂಧದಲ್ಲಿ ಪಾರದರ್ಶಕತೆಯೇ ಪ್ರಮುಖವಾಗುತ್ತದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಎಐ ಹೆಚ್ಚು ಬಳಕೆಯಾಗುತ್ತಿರುವಂತೆ, ಅಭ್ಯರ್ಥಿಗಳ ನಿರೀಕ್ಷೆಗಳೂ ಸಹ ಹೆಚ್ಚುತ್ತಿವೆ. ನೇಮಕಾತಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ವೃತ್ತಿಪರರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ, ಇದು ಪಾರದರ್ಶಕತೆ ಇರಬೇಕು ಎಂಬ ಬೇಡಿಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಭಾರತದ ಅರ್ಧದಷ್ಟು ನೇಮಕಾತಿದಾರರು (50%) ಈಗ ತಮ್ಮ ಪ್ರಕ್ರಿಯೆಗಳಲ್ಲಿ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ, ಅದರಲ್ಲೂ ವಿಶೇಷವಾಗಿ ಅಭ್ಯರ್ಥಿಗಳ ಸ್ಕ್ರೀನಿಂಗ್ ಮತ್ತು ಶಾರ್ಟ್ ಲಿಸ್ಟ್ ಮಾಡುವಾಗ ಎಐ ಅನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ವಿವರಿಸಬೇಕಾದ ಒತ್ತಡದಲ್ಲಿದ್ದಾರೆ ಎಂದು ಹೇಳುತ್ತಾರೆ.
ನೇಮಕಾತಿದಾರರು ವೇಗವಾಗಿ ಮತ್ತು ಕ್ಷಿಪ್ರವಾಗಿ ನೇಮಕ ಮಾಡಿಕೊಳ್ಳಲು ಲಿಂಕ್ಡ್ ಇನ್ ಹೇಗೆ ಸಹಾಯ ಮಾಡುತ್ತಿದೆ
ಭಾರತದ ನೇಮಕಾತಿದಾರರ ಪ್ರಮುಖ ಸವಾಲುಗಳಾದ ವೇಗ ಮತ್ತು ಗುಣಮಟ್ಟವನ್ನು ಪರಿಹರಿಸಲು, ಪ್ರತಿಭೆಗಳ ಕುರಿತಾದ ಸಂಭಾಷಣೆಗಳನ್ನು ಮುಂದಕ್ಕೆ ಕೊಂಡೊಯ್ಯಲು ವಿನ್ಯಾಸಗೊಳಿಸಲಾದ ಎಐ-ಚಾಲಿತ ನೇಮಕಾತಿ ಪರಿಕರಗಳನ್ನು ಸಿದ್ಧಪಡಿಸುವುದನ್ನು ಲಿಂಕ್ಡ್‌ಇನ್ ಮುಂದುವರಿಸಿದೆ, ಆ ವೈಶಿಷ್ಟ್ಯಗಳ ವಿವರ ಇಲ್ಲಿದೆ :
ವೇತನ ಮತ್ತು ನೋಟಿಸ್ ಪಿರಿಯಡ್ ಫಿಲ್ಟರ್ ಗಳು: ಈ ಫಿಲ್ಟರ್ ಗಳು ಸದಸ್ಯರು ತಮ್ಮ ನಿರೀಕ್ಷಿತ ಸಂಬಳ ಮತ್ತು ನೋಟಿಸ್ ಪಿರಿಯಡ್ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತವೆ. ಈ ಮಾಹಿತಿಯು ಕೇವಲ ನೇಮಕಾತಿದಾರರಿಗೆ ಮಾತ್ರ ಕಾಣಿಸುತ್ತದೆ, ಇದರಿಂದ ನೇಮಕಾತಿ ಪ್ರಕ್ರಿಯೆಯ ಆರಂಭಿಕ ಹಂತದಲ್ಲೇ ಉಂಟಾಗುವ ಅಡೆತಡೆಗಳು ಮತ್ತು ಅನಗತ್ಯ ಚರ್ಚೆಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಹೈರಿಂಗ್ ಅಸಿಸ್ಟೆಂಟ್: ನೇಮಕಾತಿದಾರರಿಗಾಗಿ ರೂಪಿಸಲಾದ ಲಿಂಕ್ಡ್ ಇನ್ ನ ಈ ಎಐ ಏಜೆಂಟ್, ಎಎಂಡಿ, ಓರ್ ಕಾನ್, ಚ್ಯೂವಿ, ಎಕ್ಸ್ ಪೀಡಿಯಾ

