ಮಾ.22ರಂದು ನಿನ್ನಿಕಲ್‌ ಪಾದೆಯಲ್ಲಿ ತಾಂಬೂಲ ಪ್ರಶ್ನೆ

0
17

ಪಡುಬಿದ್ರಿ-ಕಾರ್ಕಳ ಮಾರ್ಗದ ಕೈಗಾರಿಕಾ ಪ್ರದೇಶದಲ್ಲಿ ಇರುವ ನಿನ್ನಿಕಲ್ಲು ಪಾದೆ,ತುಳುನಾಡಿನ ಆದಿಮೂಲ ಪರಂಪರೆ, ಸಾನಿಧ್ಯ ಹಾಗೂ ಸಂಬಂಧಿತ ಪುರಾತನ ಕುರುಹುಗಳು ತುಳುನಾಡಿನ ಅಪೂರ್ವ ಇತಿಹಾಸವನ್ನು ತೆರೆದಿಟ್ಟಿವೆ . ಇತ್ತೀಚೆಗೆ ನಡೆದ ನಿನ್ನಿಕಲ್ಲು ಪಾದೆ ಜನಜಾಗೃತಿ ಸಭೆಯಲ್ಲಿ ರೂಪಿಸಿದ ಸಂರಕ್ಷಣಾ ಸಮಿತಿ ತೀರ್ಮಾನಿಸಿದಂತೆ ಮಾರ್ಚ್ 22 ರಂದು ಆದಿತ್ಯವಾರ ಬೆಳಗ್ಗೆ 9:00 ರಿಂದ ತಾಂಬೂಲ ಪ್ರಶ್ನೆ ಚಿಂತನೆ ನಡೆಸಲು ತೀರ್ಮಾನಿಸಲಾಗಿದೆ.

ಖ್ಯಾತ ದೈವಜ್ಞ , ಜ್ಯೋತಿಷ್ಯ ತಿಲಕಂ ಶಶಿಧರ್ ಮಾಂಗಡ್ ಅವರ ನೇತೃತ್ವದಲ್ಲಿ ಪ್ರಶ್ನೆ ಚಿಂತನೆ ನಡೆಯಲಿದೆ.

ಈ ಅಮೂಲ್ಯ ಪರಂಪರೆಯನ್ನು ಉಳಿಸಿ, ಪೀಳಿಗೆಗೆ ಹಸ್ತಾಂತರಿಸುವ ಈ ಮಹತ್ ಕಾರ್ಯದಲ್ಲಿ ತಾವೆಲ್ಲರೂ ಭಾಗವಹಿಸಿ ನಿನ್ನಿಕಲ್ಲು ಪುನರ್‌ ವೈಭವಿಕರಣಕ್ಕೆ ಸಹಾಯ ಸಹಕಾರಗಳನ್ನು ನೀಡಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here