ಶಕುಂತಲಾ ಅವರಿಗೆ ಬೋಧನಾ ಪ್ರಶಸ್ತಿ

0
45

ಶಾಲೆಯಲ್ಲಿ ಶೇ.100 ಫಲಿತಾಂಶ: ಗಣಿತ ಉಪನ್ಯಾಸಕಿಯ ಸಾಧನೆಗೆ ಗೌರವ

ಕಡಬ : ಮಂಗಳೂರು ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದಿರುವ ಶಕುಂತಲಾ ಅವರು ಗಣಿತಶಾಸ್ತ್ರ ಉಪನ್ಯಾಸಕಿಯಾಗಿ ಸಲ್ಲಿಸುತ್ತಿರುವ ಸೇವೆಗೆ ಮತ್ತೊಂದು ಗೌರವ ಲಭಿಸಿದೆ.

ಅವರು ಬೋಧಿಸುತ್ತಿರುವ ಶಾಲೆಯಲ್ಲಿ ಪ್ರಥಮ ಬಾರಿಗೆ ಶೇ.100 ಫಲಿತಾಂಶ ದಾಖಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಹಿನ್ನೆಲೆಯಲ್ಲಿ, ಅವರ ಪರಿಶ್ರಮ, ಸಮರ್ಪಣೆ ಹಾಗೂ ಬೋಧನಾ ಕೌಶಲ್ಯವನ್ನು ಗುರುತಿಸಿ ತಮಿಳುನಾಡಿನ ನೀಲಗಿರಿ ಎಜುಕೇಶನ್ ಬೋರ್ಡ್ ವತಿಯಿಂದ ಊಟಿಯ ಕಾರ್ಪಗಂ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಟೀಚಿಂಗ್ ಅವಾರ್ಡ್’ ನೀಡಿ ಗೌರವಿಸಲಾಯಿತು.

ಶ್ರೀ ಪ್ರದೀಶ್ ಅವರ ಪತ್ನಿಯಾಗಿರುವ ಶಕುಂತಲಾ ಅವರು ಶ್ರೀ ರಾಜರತ್ನಂ (72) ಹಾಗೂ ಶ್ರೀಮತಿ ತಮಿಳ್ ಸೆಲ್ವಿ ಅವರ ಪುತ್ರಿ. ಅವರ ಈ ಸಾಧನೆಗೆ ತಂದೆ-ತಾಯಿ, ಸಹೋದರ ವಿಶ್ವನಾಥ ಸೇರಿದಂತೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಶಕುಂತಲಾ ಅವರ ಸಾಧನೆ ಸಮುದಾಯಕ್ಕೂ ಹೆಮ್ಮೆಯ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂದು ತಮಿಳು ಸೇವಾ ಸಂಘ, ಕಡಬ (ರಿ.) ವತಿಯಿಂದ ಹಾರ್ದಿಕ ಅಭಿನಂದನೆ ಹಾಗೂ ಶುಭಾಶಯಗಳನ್ನು ಸಲ್ಲಿಸಲಾಗಿದೆ.

ವರದಿ: ಸುರೇಶ್ ಕುಮಾರ್ ಜಿ. ಚಾರ್ವಾಕ ಪಾಲ್ತಿಲ