300 ಹಾಸಿಗೆಗಳುಳ್ಳ ನಿಮ್ಹಾನ್ಸ್ ಪಾಲಿ ಟ್ರಾಮಾ ಘಟಕಕ್ಕೆ ಕೇಂದ್ರ ಅನುಮೋದನೆ: ಮೋದಿಗೆ ತೇಜಸ್ವಿ ಸೂರ್ಯ ಧನ್ಯವಾದ

0
75

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಿಮ್ಹಾನ್ಸ್​​ನ  300 ಹಾಸಿಗೆಗಳುಳ್ಳ ಪಾಲಿ ಟ್ರಾಮಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅನುಮೋದನೆ ನೀಡಿರುವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಇದು ಬೆಂಗಳೂರು ನಗರದಾದ್ಯಂತ ಅಪಘಾತಕ್ಕೀಡಾದವರಿಗೆ ತುರ್ತು ಆರೈಕೆ ಮತ್ತು ಜೀವ ಉಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಕ್ಯಾಲಸನಹಳ್ಳಿಯಲ್ಲಿ 498 ಕೋಟಿ ರೂ. ವೆಚ್ಚದಲ್ಲಿ ನಿಮ್ಹಾನ್ಸ್ ಸ್ನಾತಕೋತ್ತರ ಮತ್ತು 300 ಹಾಸಿಗೆಗಳುಳ್ಳ ಪಾಲಿ ಟ್ರಾಮಾ ಕೇಂದ್ರದ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದಿಂದ ಶುಕ್ರವಾರ ಅನುಮೋದನೆ ನೀಡಿದೆ. ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ, ಈ ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಒತ್ತಾಯಿಸಿದ್ದರು. ಅದರಂತೆ ಅಂತಿಮವಾಗಿ ಕೆಂಪೇಗೌಡ ಜಯಂತಿ ಸಮಯದಲ್ಲಿ ಮಂಜೂರು ಮಾಡಲಾಗಿದೆ.

ಪಾಲಿ ಟ್ರಾಮಾ ಘಟಕ ಸ್ಥಾಪನೆ ಇದೊಂದು ಸ್ವಾಗತಾರ್ಹ ಕ್ರಮ: ತೇಜಸ್ವಿ ಸೂರ್ಯ

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, ಇದೊಂದು ಸ್ವಾಗತಾರ್ಹ ಕ್ರಮ. ಪಾಲಿ ಟ್ರಾಮಾ ಕೇಂದ್ರವನ್ನು ಸ್ಥಾಪಿಸುವುದರಿಂದ ಅಪಘಾತ ಸಂತ್ರಸ್ತರಿಗೆ ತುರ್ತು ಪರಿಹಾರ ದೊರೆಯುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಈ ರೀತಿಯ ಸಾರ್ವಜನಿಕರಿಗೆ ತುರ್ತು ಸೇವೆ ಒದಗಿಸುವಂತಹ ಸೌಲಭ್ಯ ಸುತ್ತಮುತ್ತ ಇಲ್ಲ. 498 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರವನ್ನು ಮಂಜೂರು ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.

LEAVE A REPLY

Please enter your comment!
Please enter your name here