ವರದಿ ರಾಯಿ ರಾಜ ಕುಮಾರ
ಉಡುಪಿ ಜಿಲ್ಲೆಯ ತೆಂಕ ಎರ್ಮಾಳು ಸರಕಾರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಮಸ್ತ ವನ್ನು ಜನವರಿ 14ರಂದು ವಿತರಣೆ ಮಾಡಲಾಯಿತು. ಕ್ರೀಡಾ ಸಮಸ್ತ ವನ್ನು ನೀಡಿ ವಿತರಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅಂತರಾಷ್ಟ್ರೀಯ ಕ್ರೀಡಾಪಟು ಕುಮಾರಸ್ವಾಮಿ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳನ್ನು ಗಳಿಸಿ ಬದುಕಿನಲ್ಲಿ ಯಶಸ್ಸನ್ನು ಪಡೆಯುವಂತೆ ಹರಸಿದರು. ಈ ಸಂದರ್ಭದಲ್ಲಿ ಭಾಗೀರತಿ, ಶ್ರೀನಿಧಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಗುಲಾಬಿ, ಮುಖ್ಯ ಶಿಕ್ಷಕಿ ವಿನೋದ, ಹಾಜರಿದ್ದರು. ಹಿರಿಯ ಶಿಕ್ಷಕಿ ರಜನಿ ಸ್ವಾಗತಿಸಿದರು. ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿದರು. ಚೈತ್ರ ವಂದಿಸಿದರು.

