ಸುಹಾಸ್‌ ಶೆಟ್ಟಿ ಹತ್ಯೆಗೂ ಮುನ್ನ ‘ಭರ್ಜರಿ’ ಪಾರ್ಟಿ ಮಾಡಿದ್ದ ಆರೋಪಿಗಳು..!

0
740

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಆರೋಪಿಗಳು ಭರ್ಜರಿ ಪಾರ್ಟಿ ಮಾಡಿದ್ದ ಫೋಟೋ ಈಗ ವೈರಲ್ ಆಗುತ್ತಿವೆ.
ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ವರದಿಯಲ್ಲಿರುವಂತೆ ಚಿಕ್ಕಮಗಳೂರಿನ ಕಳಸದ ರೆಸಾರ್ಟ್ ಒಂದರಲ್ಲಿ ಏಪ್ರಿಲ್ 2 ರಂದು ಆರೋಪಿಗಳು ರಾತ್ರಿ ಇಡೀ ಪಾರ್ಟಿ ಮಾಡಿದ್ದಾರೆ.
ಮೂಲಗಳ ಪ್ರಕಾರ ಸುಹಾಸ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಲೆಂದೇ ಪಾರ್ಟಿ ಮಾಡಿರುವ ಕುರಿತು ಅನುಮಾನ ವ್ಯಕ್ತವಾಗಿದೆ.

ಕ್ಯಾಂಪ್ ಫೈರ್ ಹಾಕಿ ಸುಹಾಸ್‌ ಶೆಟ್ಟಿ ಹತ್ಯೆಯ ಆರೋಪಿಗಳಾದ ಮುಝಮ್ಮಿಲ್, ನಿಯಾಜ್ ಹಾಗೂ ಚಿಕ್ಕಮಗಳೂರು ಮೂಲದ ರಂಜಿತ್ ಪಾರ್ಟಿ ಮಾಡಿದ್ದಾರೆ. ಈ ಮೂವರ ಜೊತೆ ಇನ್ನೂ ಐದು ಜನ ಅಪರಿಚಿತರು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಈ ಪಾರ್ಟಿಯಲ್ಲಿ ರಂಜಿತ್‌ನನ್ನು ಮುಝಮ್ಮಿಲ್‌ಗೆ ನಿಯಾಜ್‌ ಪರಿಚಯ ಮಾಡಿಕೊಟ್ಟಿದ್ದ. ಈ ಪಾರ್ಟಿಯಲ್ಲೇ ಸುಹಾಸ್ ಹತ್ಯೆ ಬಗ್ಗೆ ಮಾತುಕತೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸುಹಾಸ್ ಶೆಟ್ಟಿ ಹತ್ಯೆಗೆ ಫಾಝಿಲ್‌ ಸಹೋದರ ಆದಿಲ್‌ 5 ಲಕ್ಷ ರೂ. ಸುಪಾರಿ ನೀಡಿದ್ದ. ಈ ಹಣದ ಪೈಕಿ 3 ಲಕ್ಷ ರೂ.ಹಣವನ್ನು ಮುಂಗಡವಾಗಿ ಪಾವತಿಸಲಾಗಿತ್ತು. ಈ ಹಣದಲ್ಲೇ ಪಾರ್ಟಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಮಂಗಳೂರಿನ ಮೊಹಮ್ಮದ್ ಮುಝಮ್ಮಿಲ್‌ 4 ತಿಂಗಳ ಹಿಂದೆ ಸೌದಿ ಅರೇಬಿಯಾದಿಂದ ಬಂದಿದ್ದು ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಮೇಸ್ತ್ರಿ ಕೆಲಸ ಮಾಡುತ್ತಿರುವ ನಿಯಾಜ್ ಬಜ್ಪೆ ಶಾಂತಿಗುಡ್ಡೆ ಮಸೀದಿ ಬಳಿ ನೆಲೆಸಿದ್ದ. ಕಳಸ ತಾಲೂಕಿನ ರುದ್ರ ಪಾದದ ರಂಜಿತ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಸುಹಾಸ್ ಮೇಲೆ ದಾಳಿ ಮಾಡಲು ಈತನೇ ಲಾಂಗ್ ತಂದುಕೊಟ್ಟ ಆರೋಪವಿದೆ.

LEAVE A REPLY

Please enter your comment!
Please enter your name here