Saturday, June 14, 2025
HomeUncategorizedಸುಹಾಸ್ ಶೆಟ್ಟಿ ಹತ್ಯೆಗೆ ಮುಸ್ಲಿಂ ಪೊಲೀಸ್ ಸಾಥ್? - ತನಿಖೆಯಲ್ಲಿ ಬಯಲು..!

ಸುಹಾಸ್ ಶೆಟ್ಟಿ ಹತ್ಯೆಗೆ ಮುಸ್ಲಿಂ ಪೊಲೀಸ್ ಸಾಥ್? – ತನಿಖೆಯಲ್ಲಿ ಬಯಲು..!


ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದರ ನಡುವೆಯೇ ಈ ಕೊಲೆಯಲ್ಲಿ ಅನ್ಯಕೋಮಿನ ಹೆಡ್ ಕಾನ್ಸ್ಟೇಬಲ್ ಯೋರ್ವ ಬಾಗಿಯಾಗಿದ್ದಾನೆ ಎನ್ನಲಾಗಿದೆ.
ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಸುಹಾಸ್ ಶೆಟ್ಟಿಯನ್ನು ಪ್ರತೀಕಾರಕ್ಕೆ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಕೊಲೆಯ ಸುತ್ತಮುತ್ತ ಸಾಕಷ್ಟು ಅನುಮಾನ ಹುಟ್ಟುತ್ತಲೇ ಇದ್ದು, ದಿನಕ್ಕೊಂದು ತಿರುವು ಪಡೆಯುತ್ತಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಸುಹಾಸ್ ಶೆಟ್ಟಿ ಕೊಲೆಯಲ್ಲಿ ಸ್ಥಳೀಯ ಪೊಲೀಸರ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲದೇ ಬಜಪೆ ಪೊಲೀಸರೇ ನನ್ನ ಮಗನನ್ನು ಸಾಯುವಂತೆ ಮಾಡಿದ್ದಾರೆ ಎಂದು ಸುಹಾಸ್ ತಾಯಿ ದೂರಿದ್ದಾರೆ.

ಈ ಕೊಲೆಯಲ್ಲಿ ಬಜಪೆ ಪೊಲೀಸ್ ಕಾನ್ಸ್ಟೇಬಲ್ ರಶೀದ್ ನೇರವಾಗಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಈ ಹಿಂದೆ ಸುಹಾಸ್ ಬಜಪೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ವೇಳೆ ಪದೇ ಪದೇ ಪೊಲೀಸ್ ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದರು.

ಅಲ್ಲದೇ ಕುಡುಪು ಎಂಬಲ್ಲಿ ಅಶ್ರಫ್ ಕೊಲೆಯ ಬಳಿಕ ಸುಹಾಸ್ ಶೆಟ್ಟಿಗೆ ನೀನು ಯಾವುದೇ ಮಾರಕಾಸ್ತ್ರಗಳನ್ನು ಇಡಬೇಡ, ನಿನ್ನ ಜೊತೆ ಯಾರೂ ಯುವಕರು ಇರಬಾರದು, ಹೆಚ್ಚಿಗೆ ಓಡಾಡಬಾರದು ಎಂದು ರಶೀದ್ ಎಚ್ಚರಿಕೆ ನೀಡಿದ್ದ. ಜೊತೆಗೆ ಸುಹಾಸ್ ನ ಎಲ್ಲಾ ಚಲನ ವಲನಗಳನ್ನು ರಶೀದ್ ಗಮನಿಸುತ್ತಿದ್ದ.

ಕೊಲೆಯ ದಿನ ಸುಹಾಸ್ ಶೆಟ್ಟಿ ನಿರಾಯುಧವಾಗಿ ಹೋಗುತ್ತಿದ್ದಾನೆ ಎಂದು ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ಸದ್ಯ ಈ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular