ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಅಟ್ಟಳಿಕೆ ಮುಹೂರ್ತ

0
4

ಕಾರ್ಕಳ : ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಮಿತಿ ರಿ .ಆಶ್ರಯದಲ್ಲಿ 2027 ಫೆಬ್ರವರಿ ಯಲ್ಲಿ ನಡೆಯಲಿರುವ ಶ್ರೀ ಬಾಹುಬಲಿ ಬೆಟ್ಟದಲ್ಲಿ ಬಾಹುಬಲಿ ಸ್ವಾಮಿಗೆ ಪಾದಪೂಜೆ ಮಾಡಿದ ನಂತರ ಬೆಟ್ಟದಲ್ಲಿ ಅಟ್ಟಳಿಗೆ ಮುಹೂರ್ತ ಪೂಜ್ಯ ಪ್ರಸಂಗಸಾಗರ ಮುನಿಮಹಾರಾಜರ ಪಾವನ ಸಾನಿಧ್ಯದಲ್ಲಿ , ಕಾರ್ಕಳ ಶ್ರೀ ಜೈನ ಮಠದ ಮತ್ತು ಸೊಂದಾ ಶ್ರೀ ಜೈನ ಮಠದ ಪೂಜ್ಯ ಸ್ವಾಮೀಜಿಗಳರವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ ಎಂ ಏನ್ ರಾಜೇಂದ್ರ ಕುಮಾರ್ ಶಾಸಕ ವಿ ಸುನೀಲ್ ಕುಮಾರ್, ಮಾಜಿ ಸಚಿವ ಕೆ ಅಭಯಚಂದ್ರ ಜೈನ್ , ಪಡುಬಿದ್ರೆ ಬೀಡು ರತ್ನಾಕರ ರಾಜ್ ಅರಸು ಕಿನ್ಯಾಕ್ಕ ಬಲ್ಲಾಳ್ , ಸಮಿತಿ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಮಂಗಳೂರು, ಕೋಶಾಧಿಕಾರಿ ಎ ಮೋಹನ್ ಪಡಿವಾಳ್, ಸುನೀಲ್ ಕುಮಾರ್ ಬಜಗೋಳಿ, ಕೆ ಪಿ ಜಗದೀಶ್ ಅಧಿಕಾರಿ, ಮಹಾವೀರ್ ಹೆಗ್ಡೆ, ಭರತ್ ಜೈನ್ ಸಾನೂರ್, ಶೀತಲ್ ಜೈನ್, ಮಹಾವೀರ್ ಜೈನ್ ನಲ್ಲೂರು, ಅದಿರಾಜ್ ಅಜ್ರಿ,ಸಮಿತಿಯ ಪದಾಧಿಕಾರಿಗಳು, ಶ್ರಾವಕ ಶ್ರಾವಕಿ ಬಂಧುಗಳು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.