ನಮ್ಮ ದಿವ್ಯ, ಭವ್ಯ ಜೀವನಕ್ಕೆ ನಾಂದಿ ಹಾಡಿರುವುದು ಕಲಾಕುಂಚ-ಕುಮಾರಿ ಅಪೇಕ್ಷ ಕೆ.ಯು.

0
45


ದಾವಣಗೆರೆ:ಮಕ್ಕಳ ದಿನಾಚರಣೆಯ ಸಮಾರಂಭಕ್ಕೆ ಬಾಲಕ, ಬಾಲಕಿಯರನ್ನು ವೇದಿಕೆ ಕಲ್ಪಿಸಿದ್ದು ಸಂತೋಷದ ಸಂಗತಿ. ನಮ್ಮೆಲ್ಲರ ಸಭಾ ಕಂಪನ ದೂರ ಮಾಡುವ ನಮ್ಮ ದಿವ್ಯ ಭವ್ಯ ಜೀವನಕ್ಕೆ ನಾಂದಿ ಹಾಡಿರುವುದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ. ಕಳೆದ 35 ವರ್ಷಗಳಿಂದ ಪ್ರತೀ ವರ್ಷ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆಯ ಮೊದಲೇ ಉಚಿತ ಪೂರ್ವಭಾವಿ ಸಿದ್ಧತಾ ಕಾರ್ಯಾಗಾರದಿಂದ ನಮ್ಮೆಲ್ಲರಿಗೂ ಉತ್ತೇಜನ ಬರುತ್ತದೆ. ಉತ್ತಮ ಫಲಿತಾಂಶ ಬರುತ್ತದೆ. ನಾನು ಮುಂದಿನ ವರ್ಷದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದಲ್ಲಿ “ಕನ್ನಡ ಕೌಸ್ತುಭ” ರಾಜ್ಯ ಪ್ರಶಸ್ತಿ ಪಡೆಯುತ್ತೇನೆ ಎಂದು ನಗರದ ಸಂತಪೌಲರ ಬಾಲಕೀಯ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಅಪೇಕ್ಷ ಕೆ.ಯು. ತನ್ನ ಅನಿಸಿಕೆ ಹಂಚಿಕೊAಡಳು.
ದಾವಣಗೆರೆ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದಳು. ಮುಖ್ಯ ಅತಿಥಿಗಳಾಗಿ ಅತ್ತಿಗೆರೆ ಗ್ರಾಮದ ಶ್ರೀ ಕೇಸರಿ ಪಬ್ಲಿಕ್ ಪ್ರಾಥಮಿಕ ಶಾಲೆಯ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ವೈಷ್ಣವಿ ಪ್ರಶಾಂತ್, ಸೇಂಟ್ ಜಾನ್ಸ್ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಜಿ.ಎಂ. ಚಂದನ್, ನಗರದ ಅನುಭವ ಮಂಟಪದ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರ ಸಮರ್ಥ ಜಿ.ಈ., ಶಾಮನೂರಿನ ಶ್ರೀಮತಿ ಶ್ರೀದೇವಿ ತಿಮ್ಮಾರೆಡ್ಡಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಮಾನ್ಯ ಸಂದೀಪ್ ಶೆಣೈ ಮಾತನಾಡಿ, ನಮ್ಮ ಮುಂದಿನ ಭವಿಷ್ಯಕ್ಕೆ, ಸಾಧನೆಗಳಿಗೆ ನಿಮ್ಮೆಲ್ಲರ ಹಿರಿಯರ, ಗುರುಗಳ ಆಶೀರ್ವಾದವಿರಲಿ ಸರ್ವರಿಗೂ ಮಕ್ಕಳ ದಿನಾಚರಣೆ ಶಭಾಶಯಗಳು ಎಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ ನಗರದ ವಿದ್ಯಾಸಾಗರ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ನಿರಾಲಿ ಲೋಹಿತಾಶ್ವ ಮಾತನಾಡಿ, ನಾವೆಲ್ಲ ಚಿಕ್ಕ ವಯಸ್ಸಿನಲ್ಲಿ ಕುಚೇಷ್ಟೆ, ಆಟೋಟ ಸಹಜ ಈ ಹಂತದಲ್ಲಿ ನಾವು ಶಿಕ್ಷಣದ ಕಾಳಜಿಯೊಂದಿಗೆ ಬದ್ಧತೆಯಿಂದ ಗಮನಕೊಟ್ಟು ಉತ್ತಮ ಫಲಿತಾಂಶದೊAದಿಗೆ ತಂದೆ-ತಾಯಿಗಳ ಕನಸು ನನಸು ಮಾಡಬೇಕಾಗಿದೆ. ಮನೆಯಲ್ಲಿ ತಾಯಿಯ ಜೊತೆಗೆ ಮನೆ ಕೆಲಸಕ್ಕೆ ಕೈ ಜೋಡಿಸಿದರೆ ಜೀವನಕ್ಕೆ ಸಾರ್ಥಕತೆ. ತಂದೆಯ ಉದ್ಯೋಗದ ಜೊತೆಯಲ್ಲಿ ನಾವುಗಳು ಕೆಲಸ ಮಾಡಿದರೆ ನಮಗೆ ಅನುಭವವಾಗುತ್ತದೆ. ತಂದೆ-ತಾಯಿಗಳಿಗೆ ಸಹಾಯ ಮಾಡಿದಂತೆ ಆಗುತ್ತದೆ ಎಂದರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ನಗರದ ಸಿದ್ದವೀರಪ್ಪ ಬಡಾವಣೆಯ ಶಾಖೆ ಮತ್ತು ಎಂ.ಸಿ.ಸಿ. `ಎ’ ಬ್ಲಾಕ್ ಶಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಈ ಸಮಾರಂಭ ತುಂಬಾ ತುಂಬಾ ಯಶಸ್ವಿ ಆಯಿತು ಎಂದು ಎರಡು ಶಾಖೆಯ ಅಧ್ಯಕ್ಷರುಗಳಾದ ಶ್ರೀಮತಿ ಲಲಿತಾ ಕಲ್ಲೇಶ್, ಶ್ರೀಮತಿ ಪ್ರಭಾ ರವೀಂದ್ರ ತಮ್ಮ ಸಂತೋಷ ವ್ಯಕ್ತಪಡಿಸಿದರು. ಕಲಾಕುಂಚದ ಮುತ್ತೆöÊದೆಯರು ಕಾರ್ತಿಕೋತ್ಸವದೊಂದಿಗೆ ಕನ್ನಡ ತಾಯಿ ಭುವನೇಶ್ವರಿ, ಶ್ರೀ ಗಾಯಿತ್ರಿದೇವಿ, ಶ್ರೀ ಮಹಾಲಸ ನಾರಾಯಣಿ ದೇವರುಗಳಿಗೆ ಆರತಿ ಬೆಳಗಿ ಸಾಮೂಹಿಕ ಭಜನೆಯೊಂದಿಗೆ ಆಚರಿಸಿದರು.
ಮಕ್ಕಳ ಸಮೂಹ ನೃತ್ಯ ಮತ್ತು ಆಟೋಟ ಸ್ಪಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಸ್ವರ್ಗಸ್ಥರಾದ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

LEAVE A REPLY

Please enter your comment!
Please enter your name here