11ನೇ ವಯಸ್ಸಿನಲ್ಲೇ ದೈವದ ಕೋಲಕ್ಕೆ ಬಣ್ಣ ಹಚ್ಚಿದ ಬಾಲಕ

0
971


ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮ ಮುಗೇರಕಲ ಕ್ಷೇತ್ರದ ತನ್ನಿಮಾನಿಗ ನೇಮದಲ್ಲಿ 6ನೇ ತರಗತಿಯ ವಿದ್ಯಾರ್ಥಿಯೊಬ್ಬ ಹೆಣ್ಣು ದೈವದ ಕೋಲಕ್ಕೆ ಬಣ್ಣ ಹಚ್ಚಿ ಗಮನ ಸೆಳೆದಿದ್ದಾನೆ.
ಶಿರ್ಲಾಲು ಸೂಡಿ ಶಾಲೆಯಲ್ಲಿ 6 ನೇ ತರಗತಿ ವಿದ್ಯಾರ್ಥಿಯಾದ ಸಮರ್ಥ್ ಹೆಸರಾಂತ ದೈವ ಕಲಾವಿದ ದಿ| ಮೋನು ಪಾಣಾರ ಶಿರ್ಲಾಲು ಇವರ ಮೊಮ್ಮಗನಾಗಿದ್ದು, ಅಜ್ಜ ಕಟ್ಟುತ್ತಿದ್ದ ಕೋಲವನ್ನು ನೋಡುತ್ತಾ ಬೆಳೆದಿದ್ದ.
ಜತೆಗೆ ತಂದೆ ಹರೀಶ ಅವರ ಮಾರ್ಗದಲ್ಲಿ ಈಗ ತನ್ನಿಮಾನಿಗ ಹೆಣ್ಣು ದೈವದ ಬಣ್ಣ ಹಚ್ಚಿ ಕೋಲ ನಿರ್ವಹಿಸಿದ್ದಾನೆ. ಸಮರ್ಥ್ ಚಿಕ್ಕಪ್ಪ ರಮೇಶ್‌ ಶಿರ್ಲಾಲು ಅವರು ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಸರಕಾರಿ ಶಾಲೆಯ ಶಿಕ್ಷಕರಾಗಿದ್ದು, ಅವರೂ ಪ್ರೋತ್ಸಾಹ ನೀಡಿದ್ದಾರೆ.

ಪೂರ್ವಜರು ಆರಾಧಿಸಿಕೊಂಡು ಬಂದಿರುವ ಕಲೆಯನ್ನು ಬಾಲಕ ಸಣ್ಣ ವಯಸ್ಸಿನಲ್ಲೇ ಕಲಿತು ಕೋಲ ಕಟ್ಟಿರುವುದು ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here