ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ !

0
57

ಸಮಸ್ತ ಮಾನವ ಕುಲದ ಕಲ್ಯಾಣಕ್ಕಾಗಿ ‘ಶ್ರೀ ಮಹಾಧನ್ವಂತರಿ ಯಜ್ಞ’ವು ಭಾವಪೂರ್ಣ ವಾತಾವರಣದಲ್ಲಿ ಸಂಪನ್ನಗೊಂಡಿತು !

ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – ಪ್ರಸ್ತುತ ಸಮಯವು ಸಮಸ್ತ ಮಾನವ ಕುಲಕ್ಕೆ ಅತ್ಯಂತ ಕಷ್ಟಕರವಾದ ಸಮಯ, ಅಂದರೆ ಆಪತ್ಕಾಲವಾಗಿದೆ. ಯುದ್ಧದ ಬಿಕ್ಕಟ್ಟು ಸಮೀಪಿಸುತ್ತಿದೆ. ಈ ಕಠಿಣ ಸಮಯದಲ್ಲಿ, ಶತ್ರುಗಳು ಕೇವಲ ಆಯುಧಗಳಿಂದ ಮಾತ್ರವಲ್ಲದೆ, ಆಧುನಿಕ ತಂತ್ರಜ್ಞಾನದ ಮೂಲಕ ರೋಗಕಾರಕಗಳಾದ (ವೈರಸ್, ಬ್ಯಾಕ್ಟೀರಿಯಾ ಇತ್ಯಾದಿ) ಮೂಲಕವೂ ನಮ್ಮ ಮೇಲೆ ಆಕ್ರಮಣ ಮಾಡಬಹುದು. ಈ ಅಜ್ಞಾತ ಮತ್ತು ಹೊಸ ವಿಪತ್ತುಗಳನ್ನು ಎದುರಿಸಲು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬಲವು ಅತ್ಯಂತ ಅವಶ್ಯಕ. ‘ಎಲ್ಲರಿಗೂ ಒಳ್ಳೆಯದಾಗಲಿ’ ಎಂಬ ಉದ್ದೇಶದಿಂದ ‘ಶ್ರೀ ಮಹಾಧನ್ವಂತರಿ ಯಜ್ಞ’ವನ್ನು ಆಯೋಜಿಸಲಾಗಿತ್ತು. ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಅಂದರೆ ‘ಎಲ್ಲಾ ಜನರು ಸಂತೋಷವಾಗಿರಲಿ’ ಎಂಬ ಭಾವದೊಂದಿಗೆ ಸನಾತನ ಸಂಸ್ಥೆಯು ಆಯೋಜಿಸಿದ ಐತಿಹಾಸಿಕ ಮತ್ತು ಭವ್ಯ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಈ ಯಜ್ಞವು ನೆರವೇರಿತು. ಈ ಸಂದರ್ಭದಲ್ಲಿ ಭಾರತ ಮತ್ತು ವಿದೇಶಗಳಿಂದ ಆಗಮಿಸಿದ 20,000 ಕ್ಕೂ ಹೆಚ್ಚು ಸಾಧಕರು ಮತ್ತು ಹಿಂದೂ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

ಈ ಮಹಾಯಜ್ಞದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ, ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ, ಗೋವಾದ ಆರೋಗ್ಯ ಸಚಿವ ಶ್ರೀ ವಿಶ್ವಜಿತ್ ರಾಣೆ ಹಾಗೂ ಅವರ ಪತ್ನಿ ಶಾಸಕಿ ಸೌ. ದಿವ್ಯಾ ರಾಣೆ, ಅನೇಕ ಸಂತರು-ಮಹಂತರು ಮತ್ತು ಪ್ರತಿಷ್ಠಿತ ವ್ಯಕ್ತಿಗಳು ವಿಶೇಷವಾಗಿ ಉಪಸ್ಥಿತರಿದ್ದರು. ವೈದಿಕ ಮಂತ್ರಗಳ ಉಚ್ಚಾರಣೆಯಿಂದ ವಾತಾವರಣವು ಭಕ್ತಿಮಯ ಮತ್ತು ಚೈತನ್ಯಮಯವಾಗಿತ್ತು.

ಈ ಕುರಿತು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ ಅಭಯ ವರ್ತಕ ಅವರು ಮಾತನಾಡಿ, “ಶಿವಾಗಮ ವಿದ್ಯಾ ವಿಭೂಷಿತ ಆಗಮಾಚಾರ್ಯ ಶ್ರೀ ಅರುಣಕುಮಾರ್ ಗುರುಮೂರ್ತಿ ಮತ್ತು ಗುರುಮೂರ್ತಿ ಶಿವಾಚಾರ್ಯ ಅವರ ಮಾರ್ಗದರ್ಶನದಲ್ಲಿ ಈ ಯಜ್ಞದಲ್ಲಿ 61 ಯಜಮಾನ ದಂಪತಿಗಳು ಭಾಗವಹಿಸಿದ್ದರು. ದೇವರ ಸಾವಿರಾರು ಭಕ್ತರು ಮತ್ತು ವೇದಜ್ಞ ಬ್ರಾಹ್ಮಣರು ಒಟ್ಟಾಗಿ ಯಜ್ಞ ಮಾಡಿದಾಗ, ಆ ಯಜ್ಞವು ‘ಮಹಾಯಜ್ಞ’ವಾಗುತ್ತದೆ. ಈ ರೀತಿಯಾಗಿ ಸಾವಿರಾರು ಭಕ್ತರು ಈ ಮಹೋತ್ಸವದಲ್ಲಿ ಒಟ್ಟುಗೂಡಿ ನೆರವೇರಿಸಿದ ಯಜ್ಞವು ‘ಧನ್ವಂತರಿ ಯಜ್ಞ’ದಿಂದ ಈಗ ‘ಶ್ರೀ ಮಹಾಧನ್ವಂತರಿ ಯಜ್ಞ’ವಾಗಿದೆ. ಈ ಯಜ್ಞದ ಸಂಕಲ್ಪವು ಕೇವಲ ವೈಯಕ್ತಿಕ ಅಥವಾ ಕೌಟುಂಬಿಕವಾದುದಲ್ಲ, ಬದಲಾಗಿ ಜಾಗತಿಕವಾಗಿದೆ” ಎಂದರು.

LEAVE A REPLY

Please enter your comment!
Please enter your name here