Saturday, June 14, 2025
HomeUncategorizedಕಲಿತ ಶಾಲೆಯಲ್ಲೇ ಯುವಕ ಆತ್ಮಹತ್ಯೆ

ಕಲಿತ ಶಾಲೆಯಲ್ಲೇ ಯುವಕ ಆತ್ಮಹತ್ಯೆ


ಉಳ್ಳಾಲ:ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸಂಬಂಧಿಕರಿಗೆ ನನ್ನ ಕಿಡ್ನಿಯನ್ನು ನೀಡಿ, ಮೇ 29ರಂದು ನಿಗದಿಯಾಗಿರುವ ಸಹೋದರನ ವಿವಾಹವನ್ನು ನಿಲ್ಲಿಸಬೇಡಿ’ ಎಂದು ಡೆತ್ ನೋಟ್ ಬರೆದಿಟ್ಟ ಯುವಕ ತಾನು ಕಲಿತ ಶಾಲೆಯ ಆವರಣದಲ್ಲಿ ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ನಾಡು ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಘಟನೆ ನಡೆದಿದೆ.

ಕುರ್ನಾಡು ಹೂವಿನಕೊಪ್ಪಲ ನಿವಾಸಿ ಸುಧೀರ್ (32) ಆತ್ಮಹತ್ಯೆ ಮಾಡಿಕೊಂಡವರು.

ಪೇಂಟರ್‌ ಆಗಿದ್ದ ಸುಧೀರ್, ನಸುಕಿನ ಜಾವ ಬೈಕ್‌ನಲ್ಲಿ ಹಾಲು ತರಲು ಮನೆಯಿಂದ ತೆರಳಿದ್ದರು. ತಡವಾದರೂ ಮಗ ಬಾರದ ಕಾರಣ ಅವರ ತಾಯಿ ಸುಧೀರ್ ಅವರನ್ನು ಹುಡುಕೊಂಡು ಹೋದಾಗ ಮನೆ ಸಮೀಪದ ಶಾಲೆಯ ಹೊರಗಡೆ ಬೈಕ್ ಕೀ ಸಮೇತ ಪತ್ತೆಯಾಗಿತ್ತು. ಶಾಲೆಯೊಳಗೆ ಗಮನಿಸುವಾಗ ಸುಧೀರ್ ಅವರು ಶಾಲೆಯ ಮಹಡಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಅವಿವಾಹಿತರಾಗಿದ್ದ ಸುಧೀರ್ ಅವರ ಸಹೋದರಿಯ ಪತಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ತನ್ನ ಕಿಡ್ನಿ ದಾನ ಮಾಡುವಂತೆ ಹಾಗೂ ಮೇ 29ರಂದು ನಿಗದಿಯಾಗಿರುವ ಸಹೋದರನ ವಿವಾಹವನ್ನು ನಿಲ್ಲಿಸದಂತೆ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಧೀರ್ ಅವರು ದತ್ತಾತ್ರೇಯ ಭಜನಾ ಹಾಗೂ ಯಕ್ಷಗಾನ ಸಂಘದ ಸದಸ್ಯರಾಗಿದ್ದರು.

RELATED ARTICLES
- Advertisment -
Google search engine

Most Popular