ಪುತ್ತೂರು: ಸ್ವಾಮಿ ವಿವೇಕಾನಂದರು ಹೇಳಿರುವುದು ಬಹಳ ಸ್ಪಷ್ಟ–“ನೀವುನಿಮ್ಮನ್ನು ಬೆಳೆಸಿದರೆ, ದೇಶ ಸ್ವಯಂ ಬೆಳೆಯುತ್ತದೆ.” ರಾಷ್ಟ್ರವಿಕಾಸದ ಮೂಲವೇ ಆತ್ಮವಿಕಾಸ. ಆತ್ಮವಿಕಾಸಎಂದರೆ ಕೇವಲ ವಿದ್ಯಾಭ್ಯಾಸಅಥವಾಉದ್ಯೋಗ ಮಾತ್ರವಲ್ಲ, ಅದು ನಮ್ಮದೇಹ, ಮನಸ್ಸು ಮತ್ತುಆತ್ಮದ ಸಮಗ್ರ ಬೆಳವಣಿಗೆ.
ವಿವೇಕಾನಂದರ ಆದರ್ಶಗಳು ನಮ್ಮನ್ನು ಮೂರು ಮುಖ್ಯ ದಿಕ್ಕುಗಳಲ್ಲಿ ನಡೆಸುತ್ತದೆ: ಶಕ್ತಿ, ಶ್ರದ್ಧೆ ಮತ್ತು ಸೇವೆ. ಮೊದಲನೆಯದಾಗಿ, ಶಕ್ತಿ –ದೇಹಬಲಮತ್ತುಮನೋಬಲಎರಡೂರಾಷ್ಟ್ರನಿರ್ಮಾಣಕ್ಕೆಅವಶ್ಯಕ. ಎರಡನೆಯದಾಗಿ, ಶ್ರದ್ಧೆ–ನಮ್ಮಮೇಲೆ, ನಮ್ಮಸಂಸ್ಕೃತಿಯಮೇಲೆಮತ್ತುನಮ್ಮದೇಶದಮೇಲೆವಿಶ್ವಾಸವಿರಬೇಕು. ಮೂರನೆಯದಾಗಿ, ಸೇವೆ –ಸ್ವಾರ್ಥವಿಲ್ಲದಸೇವೆಸಮಾಜವನ್ನುಬದಲಾಯಿಸುವಶಕ್ತಿಶಾಲಿಸಾಧನ.
ಯುವಕರೇ, ಆತ್ಮವಿಕಾಸವನ್ನು ಕೇವಲ ಪುಸ್ತಕದಜ್ಞಾನದಲ್ಲಿ ಸೀಮಿತಗೊಳಿಸಬೇಡಿ. ಕ್ರೀಡಾಂಗಣದಲ್ಲಿ ಬೆವರು ಸುರಿಸಿ, ಗ್ರಂಥಾಲಯದಲ್ಲಿಜ್ಞಾನ ಕಲೆಹಾಕಿ, ಗ್ರಾಮದಲ್ಲಿ ಸೇವೆ ಮಾಡಿ. ನಿಮ್ಮ ಕಣ್ಣುಗಳಲ್ಲಿ ಕನಸು, ಹೃದಯದಲ್ಲಿದೇಶಭಕ್ತಿ, ಕೈಯಲ್ಲಿಕಾರ್ಯ–ಇವುಗಳಮಿಶ್ರಣವೇನಿಜವಾದರಾಷ್ಟ್ರಶಕ್ತಿ. ನಮ್ಮ ವೈಯಕ್ತಿಕ ಗುಣಗಳು, ನೈತಿಕತೆ ಮತ್ತುಜವಾಬ್ದಾರಿಯುರಾಷ್ಟ್ರದಗುಣಮಟ್ಟವನ್ನು ನಿರ್ಧರಿಸುತ್ತವೆ. ಆದ್ದರಿಂದಆತ್ಮವಿಕಾಸವನ್ನುರಾಷ್ಟ್ರಸೇವೆಯ ಮಾರ್ಗವಾಗಿ ನೋಡೋಣ.ಎಂದುಖ್ಯಾತ ವಾಗ್ಮಿ, ಲೇಖಕ, ಚಿಂತಕಮತ್ತು ಮೈಸೂರಿನ ವಿವೇಕವಂಶಿ ಫೌಂಡೇಶನ್ ನ ಸ್ಥಾಪಕರಾದ ಶ್ರೀ ನಿತ್ಯಾನಂದಎಸ್ ಬಿ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದಅಧ್ಯಯನಕೇAದ್ರದಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿಉಪನ್ಯಾಸಕಾರ್ಯಕ್ರಮದನಲ್ವತೆಂಟನೇಉಪನ್ಯಾಸದಲ್ಲಿ”ಆತ್ಮವಿಕಾಸದಿAದರಾಷ್ಟ್ರವಿಕಾಸ–ವಿವೇಕಾನAದರದಾರಿದೀಪ” ಎಂಬ ವಿಷಯದಕುರಿತುಅವರು ಮಾತನಾಡಿದರು. ಈ ಕಾರ್ಯಕ್ರಮವುಉಡುಪಿಯಅಜ್ಜರಕಾಡಿನ,ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮದರ್ಜೆಕಾಲೇಜು ಮತ್ತು ಸ್ನಾತಕೋತ್ತರಅಧ್ಯಯನಕೇಂದ್ರ, ಇಲ್ಲಿಜರುಗಿತು.
ಈ ಸಂದರ್ಭದಲ್ಲಿ,ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮದರ್ಜೆಕಾಲೇಜು ಮತ್ತು ಸ್ನಾತಕೋತ್ತರಅಧ್ಯಯನಕೇಂದ್ರ, ಇಲ್ಲಿನಪ್ರಾಂಶುಪಾಲರಾದ ಶ್ರೀ. ಸೋಜನ್ ಕೆ ಜಿ, ಹಾಗೂ ಉಪನ್ಯಾಸಕರು ಮತ್ತುಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದಅಧ್ಯಯನಕೇAದ್ರದ ಸಂಯೋಜಕರಾದಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮದರ್ಜೆಕಾಲೇಜು ಮತ್ತು ಸ್ನಾತಕೋತ್ತರಅಧ್ಯಯನಕೇಂದ್ರ, ಇಲ್ಲಿನಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಕ್ಷೇಮಾಪಾಲನಾಧಿಕಾರಿಯಾದ ಪ್ರೊ. ನಿಕೇತನವಂದಿಸಿದರು. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದಡಾ. ರಾಜೇಂದ್ರಕಾರ್ಯಕ್ರಮವನ್ನು ನಿರೂಪಿಸಿದರು.

