ಮುಂದುವರಿದ ಕೊರಗರ 24ನೇ ದಿನದ ಅಹೋರಾತ್ರಿ ಧರಣಿ ಸತ್ಯಾಗ್ರಹ

0
99

ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರ ಭೇಟಿ – ಉಡುಪಿ ಪುರಾತತ್ತ್ವವಿದ್ವಾಂಸರ ಭೇಟಿ.

ಮಣಿಪಾಲ : ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಕೊರಗ ಯುವಜನರ ನೇರ ನೇಮಕಾತಿಗಾಗಿ ಅಹೋರಾತ್ರಿ ಧರಣಿಯು 24 ನೇ ದಿನದತ್ತ ಮುಂದುವರಿಯುತ್ತಿದ್ದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಕಾಪು ಮತ್ತು ಪ್ರೊ. ಟಿ. ಮುರುಗೇಶಿ, ಪುರಾತತ್ತ್ವ ವಿದ್ವಾಂಸರು, ಉಡುಪಿ ಭೇಟಿ ನೀಡಿ ಸಮುದಾಯದ ಅಹವಾಲುಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಸಂಯೋಜಕ ಪುತ್ರನ್ ಹೆಬ್ರಿ, ಒಕ್ಕೂಟದ ಮಾಜಿ ಉಪಾಧ್ಯಕ್ಷ ಶೇಖರ ಕೆಂಜೂರು, ಭಾರತಿ ಎಲ್ಲೂರು, ಶಕುಂತಲಾ ನೇಜಾರು, ಸಂಜೀವ ಬಾರ್ಕೂರು, ಪ್ರವೀಣ್ ಹೆಬ್ರಿ, ಸುನೀತಾ ಅಡ್ವೆ, ಸುಪ್ರಿಯಾ ಎಸ್ ಕಿನ್ನಿಗೋಳಿ, ರಾಜೇಶ್ವರಿ ಬಂಡಿಮಠ, ಶಿವರಾಜ್ ಬಂಡಸಾಲೆ, ನಾಗು ನಾಡ, ನರಸಿಂಹ ಪೆರ್ಡೂರು, ಶೀನ ಬೆಳ್ಮಣ್ ಮತ್ತು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here