ಸಾಧಕರಿಗೆ ಸನ್ಮಾನ.
ರಂಗಭೂಮಿಯು ಕಲಾವಿದರಿಗೆ ಶಿಸ್ತು, ಸಮಯ ಪಾಲನೆ , ಬದ್ಧತೆಯನ್ನು ಕಲಿಸುತ್ತದೆ . ಕಲಾವಿದರಾದವರು ಅಹಂಕಾರ ಪಡಬಾರದು. ವಿಶ್ವ ರಂಗಭೂಮಿಗೆ ಭಾರತದ ಕೊಡುಗೆ ಅಪಾರವಾದದ್ದು ಎಂದು ಯೋಗೀಶ್ ಗಾಣಿಗ ಕೊಳಲಗಿರಿ ಹೇಳಿದರು. ಅವರು ಸಾಂಸ್ಕೃತಿಕ ಕಲಾ ಪ್ರಾಕಾರಗಳ ಸಂಸ್ಥೆಯಾದ ಕಲಾನಿಧಿ ರಿ ಉಡುಪಿ ಇದರ ದಶಮಾನೋತ್ಸವ ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯನ್ನು ಕುಮಾರಿ ಅಕ್ಷರಗಳಿಗೆ ಮೇಕಪ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ಬಿ. ಜಯಕರ ಶೆಟ್ಟಿ ಇಂದ್ರಾಳಿಯವರು ಬೇರೆ ಬೇರೆ ಕಲೆಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿ ದುಶ್ಚಟಗಳಿಗೆ ಬಲಿಯಾಗಲಾರ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಉಡುಪಿ ಜಿಲ್ಲೆಯ ಕೊಡುಗೆ ಗಣನೀಯ ವಾದದ್ದು ಎಂದರು. ಅತಿಥಿಗಳಾಗಿ ಕೆ.ಜೆ.ಗಣೇಶ್, ದಯಾನಂದ ಡಿ. ಸೀತಾಲಕ್ಷ್ಮಿ ಅಡಿಗ ಪಾಲ್ಗೊಂಡಿದ್ದರು. ಬೈಲೂರು ಪ್ರಭಾಕರ ಭಂಡಾರಿ, ಮಂಜುನಾಥ ರಾವ್ ಹಾವಂಜೆ, ರಾಜ್ ಗೋಪಾಲ ಶೇಟ್ ಉಡುಪಿ, ಉಷಾ ರಮಾನಂದ ದೊಡ್ಡಣಗುಡ್ಡೆ, ಪ್ರಕಾಶ್ ರಾವ್ ಉಡುಪಿ,ವೀಕ್ಷಿತ್ ಕೊಡಂಚ ಮಾರ್ಪಳ್ಳಿ, ಸಂದೀಪ್ ರೈ ಉಡುಪಿ, ರಘು ಪಾಂಡೇಶ್ವರ ಸಾಸ್ತಾನ, ಸದಾನಂದ ಕುಂದರ್ ಕೋಡಿಬೆಂಗ್ರೆ, ಸ್ವರಾಜ್ಯಲಕ್ಷ್ಮಿ ಅಲೆವೂರು, ಶ್ರೀ ಗೌತಮ್ ಕುಂದರ್ ಪಿತ್ರೋಡಿ, ಮಧುಕರ ಸನಿಲ್ ಉದ್ಯಾವರ, ಪ್ರವೀಣ್ ಆಚಾರ್ಯ ದೊಡ್ಡಣ್ಣಗುಡ್ಡೆ ಇವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಪತ್ರವನ್ನು ಪ್ರಣಮ್ಯ ರಾವ್ ಹಾಗೂ ಶ್ರೀನಿಧಿ ವಾಚಿಸಿದರು. ರೋಹಿತ್ ಪ್ರಾರ್ಥನೆಗೈದರು. ಕಲಾನಿಧಿ ಸಂಸ್ಥೆಯ ಅಧ್ಯಕ್ಷೆ ಉಪ್ಪೂರು ಭಾಗ್ಯಲಕ್ಷ್ಮಿ ಸ್ವಾಗತಿಸಿ ನಿರೂಪಿಸಿದರು. ನಟರಾಜ್ ಮೇಲಂಟ ವಂದಿಸಿದರು.ತಂಡದ ಸದಸ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಂಗಗೀತೆಗಳನ್ನು ಹಾಡಲಾಯಿತು.