ಪಂಚಾಯತ್‌ ವಸ್ತುಗಳ ಕಳ್ಳತನ; ಉಪಾಧ್ಯಕ್ಷನ ವಿರುದ್ಧ ದೂರು!

0
145

ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮ ಪಂಚಾಯತ್‌ನಲ್ಲಿದ್ದ ವಸ್ತುಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯತ್ ನ ಉಪಾಧ್ಯಕ್ಷರ ವಿರುದ್ಧ ದೂರು ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಪಿಡಿಒ ದೂರು ನೀಡಿದ್ದು, ಸೆ.25ರಂದು ಗ್ರಾಮ ಪಂಚಾಯತ್ ಚರಾಸ್ತಿಗಳನ್ನು ಪರಿಶೀಲನೆ ಮಾಡುವಾಗ ಪಂಚಾಯತ್ ನ ಚರಾಸ್ತಿಗಳಾದ ಹೆಡ್‌ಫೋನ್, ಧ್ವನಿವರ್ಧಕ ಸ್ಟಾಂಡ್, ಮೈಕ್ ಸೆಟ್, ಸಿಸಿ ಕೆಮರಾಗಳು ಕಳವು ಆಗಿರುವುದು ಗಮನಕ್ಕೆ ಬಂದಿದ್ದು, ಕಳವಾದ ಸೊತ್ತುಗಳ ಮೌಲ್ಯ ಹತ್ತು ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಳವಾದ ಸೊತ್ತುಗಳು ದುರಸ್ಥಿಯಲ್ಲಿದ್ದು, ಉಪಯೋಗ ಇಲ್ಲದೆ, ದಾಸ್ತಾನು ಇರಿಸಲಾಗಿತ್ತು ಎನ್ನಲಾಗಿದೆ.

ಕಳವಾದ ಸೊತ್ತುಗಳನ್ನು ಪಂಚಾಯತ್ ಉಪಾಧ್ಯಕ್ಷರಾಗಿರುವ ಮಾಧವ ಚಾಂತಾಳ ಅವರು ಕಳವು ಮಾಡಿರುವ ಬಗ್ಗೆ ಸಂಶಯ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here