ಜಲಸಾರಿಗೆ ಯೋಜನೆ ಜಾರಿಗೊಳಿಸುವ ಚಿಂತನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

0
47


ಉಡುಪಿ: ಕರ್ನಾಟಕ ಕರಾವಳಿ ಸುಮಾರು 320 ಕಿಮೀ ವ್ಯಾಪ್ತಿಯನ್ನು ಹೊಂದಿದ್ದು, ಮೀನುಗಾರಿಕೆ ಜೊತೆಗೆ ಹೆದ್ದಾರಿಗೆ ಸಮಾನಾಂತರವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಜಲಸಾರಿಗೆ ಯೋಜನೆ ಜಾರಿಗೊಳಿಸುವ ಚಿಂತನೆ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಲ್ಪೆ ಉಡುಪಿ&ಕೊಚ್ಚಿನ್​ ಶಿಪ್​ಯಾರ್ಡ್​ನಲ್ಲಿ ಓಷನ್​ ಸ್ಪಾರ್ಕಲ್​ ಲಿ. (ಅದಾನಿ ಕಂಪನಿ)ಗಾಗಿ 70 ಟನ್​ ಬೋಲಾರ್ಡ್​ ಪುಲ್​ ಟಗ್​ ನೌಕೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಮತ್ಸ$ ಸಂಪದ ಯೋಜನೆಗೆ ಸಾವಿರಾರು ಕೋಟಿ ರೂ. ಅನುದಾನ ನೀಡಲಿದ್ದು, ಹಡಗು ಮತ್ತು ಬೋಟ್​ಗಳ ನಿರ್ಮಾಣ ಕ್ಷೇತ್ರಕ್ಕೂ ಬಲ ತುಂಬಲಿದೆ. ಕೊಚ್ಚಿನ್​ ಶಿಪ್​ಯಾರ್ಡ್​ನಲ್ಲಿ ಹಡಗುಗಳಿಗೆ ಬೇಡಿಕೆಯೂ ಹೆಚ್ಚಾಗಲಿದೆ. ಇದರಿಂದ ಸ್ಥಳಿಯರಿಗೂ ಹೆಚ್ಚು ಉದ್ಯೋಗಾವಕಾಶ ಲಭಿಸದೆ ಎಂದರು.

ಮುಖ್ಯ ಅತಿಥಿಗಳಾಗಿ ಓಷನ್​ ಸ್ಪಾರ್ಕಲ್​ನ ಮರಿಯಾ ಆನ್​ಸನ್​, ನಾಗಭೂಷಣ್​ ರಾವ್​, ವಿವೇಕ್​ ದೇಸಾಯಿ, ಪ್ರಶಾಂತ್​ ನಾಯರ್​, ಕೊಚ್ಚಿನ್​ ಶಿಪ್ಯಾರ್ಡ್​ ನಿರ್ದೇಶಕ ರಾಜೇಶ್​ ಗೋಪಾಲಕೃಷ್ಣನ್​ ಮೊದಲಾದವರು ಉಪಸ್ಥಿತರಿದ್ದರು. ಶಿಪ್​ಯಾರ್ಡ್​ ಸಿಇಒ ಹರಿಕುಮಾರ್​ ಸ್ವಾಗತಿಸಿದರು. ಸವಿತಾ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here