ಎ. 5-6ಕ್ಕೆ ಶತಮಾನೋತ್ಸವ ಭವನ ಉದ್ಘಾಟನೆ-ಸನ್ಮಾನ-ಸಭೆ
ಬಜಪೆ : ವಾಮಂಜೂರು ತಿರುವೈಲಿನ ಸರ್ಕಾರಿ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ `ಶತಮಾನೋತ್ಸವ ಸಂಭ್ರಮ’ ಹಾಗೂ ಶತಮಾನೋತ್ಸವ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಎ. 5 ಮತ್ತು 6ರಂದು ಶಾಲಾ ಆವರಣದಲ್ಲಿ ನಡೆಯಲಿದೆ.
ಎ. 5ರಂದು ಬೆಳಿಗ್ಗೆ 9:30ಕ್ಕೆ ವಿಧಾನಸಭಾ ಸಭಾಪತಿ ಯು. ಟಿ. ಖಾದರ್ ಅವರು ಶತಮಾನೋತ್ಸವ ಭವನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಎಲ್‍ಸಿ ಐವನ್ ಡಿ’ಸೋಜ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರೆ, ಮೂಡಬಿದ್ರೆಯ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‍ನ(ರಿ) ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಎಂಎಲ್‍ಸಿ ಮಂಜುನಾಥ ಭಂಡಾರಿ, ಸೀತಾರಾಮ ಜಾಣು ಶೆಟ್ಟಿ, ತಾರನಾಥ ಗಟ್ಟಿ, ಜೋಕಿಂ ಸ್ಟಾನ್ಲಿ ಅಲ್ವಾರಿಸ್, ಉಮರ್ ಯು. ಎಚ್. ಸದಾನಂದ ಮಾವಜಿ, ಡಾ. ಆನಂದ, ಗೋವಿಂದ ಮಡಿವಾಳ, ಎಚ್. ಆರ್. ಈಶ್ವರ್, ಜ್ಞಾನೇಶ್ ಎಂ. ಪಿ. ಸುಷ್ಮಾ ವಿ. ಕಿಣಿ, ಎ. ಮನೋಜ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 10:30ರಿಂದ 1ರವರೆಗೆ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಗುರುಗಳಿಗೆ ಗುರುವಂದನೆ', 2ರಿಂದ
ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ’ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ. ಎನ್. ಆರ್. ದಾಮೋದರ ಶರ್ಮ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.
ಎ. 5ರಂದು ಸಂಜೆ 5:30ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಎಂಎಲ್‍ಸಿಗಳಾದ ಎಸ್. ಎಲ್. ಭೋಜೇಗೌಡ, ಕಿಶೋರ್ ಬಿ. ಆರ್ ಹಾಗೂ ಪ್ರತಾಪಸಿಂಹ ನಾಯಕ್, ಮಮತಾ ಗಟ್ಟಿ, ಸದಾಶಿವ ಉಳ್ಳಾಲ, ಮಾಲಾ ಎನ್. ರಾವ್, ಡಾ. ಎಂ. ಪಿ. ಶ್ರೀನಾಥ್, ಎಚ್. ಎಂ. ರೇವಣ್ಣ, ಡಾ. ಸತೀಶ್ ಭಂಡಾರಿ, ಮಾಜಿ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ರೋಹನ್ ಮೊಂತೆರೊ, ಚಂದ್ರಶೇಖರ ಭಟ್, ಅಬ್ದುಲ್ ಖಾದರ್ ಭಾಗವಹಿಸಲಿದ್ದಾರೆ. ಕರಾವಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ಅವರು ಪ್ರಧಾನ ಭಾಷಣಕಾರಾಗಿದ್ದಾರೆ. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಂಜೆ 4ರಿಂದ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಸಂಜೆ 7ರಿಂದ ಕೊಯಿಲಾದ ವೈಷ್ಣವಿ ಕಲಾವಿದೆರ್ ತಂಡದಿಂದ `ಕುಸಲ್ದ ಗೌಜಿ’ ಪ್ರಹಸನ ಪ್ರದರ್ಶನಗೊಳ್ಳಲಿದೆ.
ಎ. 6ರಂದು ಸಂಜೆ 5:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ. ಬೃಜೇಶ್ ಚೌಟ, ಸಂಸದ ಡಿ. ವೀರೇಂದ್ರ ಹೆಗ್ಗಡೆ, ಪುತ್ತೂರು ಶಾಸಕ ಹರೀಶ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಎಂಎಲ್‍ಸಿ ಧನಂಜಯ ಸುರ್ಜೆ, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಜೇಮ್ಸ್ ಮೆಂಡೋನ್ಸ ವಾಮಂಜೂರು, ಎಂ. ಬಿ. ಪುರಾಣಿಕ್, ರಾಜಲಕ್ಷ್ಮೀ, ಮಹೇಶ್ ಹೊಳ್ಳ, ಲಿಲ್ಲಿ ಪಾಯ್ಸ್, ಡಿ. ನಿತ್ಯಾನಂದ ಶೆಟ್ಟಿ ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ಏರ್ಪಡಿಸಲಾಗಿದೆ.
ಬೆಳಿಗ್ಗೆ 10ರಿಂದ ಕ್ಲಸ್ಟರ್ ಹಂತದ ಶಾಲೆಗಳಿಂದ ಮಕ್ಕಳ ಸಾಂಸ್ಕøತಿಕ ಸ್ಪರ್ಧೆ, ಮಧ್ಯಾಹ್ನ 1 ಗಂಟೆಗೆ ಭೋಜನ, ಸಂಜೆ 3ಕ್ಕೆ ಹಳೆ ವಿದ್ಯಾರ್ಥಿಗಳ ಮಹಾ ಸಂಗಮ, 4 ಕ್ಕೆ ಹಳೆ ವಿದ್ಯಾರ್ಥಿಗಳಿಂದ `ಮಹಿಷ ವಧೆ’ ಯಕ್ಷಗಾನ ಹಾಗೂ ರಾತ್ರಿ 8:30ರಿಂದ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.