ಈ ವರ್ಷದ ಶ್ರಾವಣ ಸಂಧ್ಯಾ ಹಾಗೂ ಕಾಶೀ ಸಮಾರಾಧನೆ ಕಾರ್ಯಕ್ರಮ

0
6

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು (ರಿ.) ಉಪ್ಪುಂದ ವಲಯ, ಉಪ್ಪುಂದ ಈ ವರ್ಷದ ಶ್ರಾವಣ ಸಂಧ್ಯಾ ಕಾರ್ಯಕ್ರಮ ಹಾಗೂ ಕಾಶೀ ಸಮಾರಾಧನೆ ಕಾರ್ಯಕ್ರಮದ ಆಮಂತ್ರಣ
ಶ್ರೀ ಗುರುನರಸಿಂಹ ಸಭಾಭವನ ಕಿರಿಮಂಜೇಶ್ವರದಲ್ಲಿ ಸಂಭ್ರಮದಲ್ಲಿ ನಡೆಯಿತು. ಮಹಿಳಾ ವೇದಿಕೆಯಿಂದ ವಿಷ್ಣು ಸಹಸ್ರನಾಮ ಪಟ್ಟಣ, ಗಂಗಾ ಪೂಜೆ ಸಂಭ್ರಮದಲ್ಲಿ ನೆರವೇರಿತು.

ನಿವೃತ್ತ ಉಪನ್ಯಾಸಕ ವಾಸುದೇವ ಕಾರಂತ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬ್ರಾಹ್ಮಣರಲ್ಲಿ ಇರುವ ಸದ್ಗುಣಗಳು ಮತ್ತು ಪ್ರತಿಭೆ ಆಧಾರದ ಮೇಲೆಯೇ ಜೀವನವನ್ನು ತಾತ್ವಿಕತೆಯೊಂದಿಗೆ ನಡೆಸಬೇಕು. ವೇದ ಮತ್ತು ಉಪನಿಷತ್ ಗಳಲ್ಲಿ ಇರುವ ತತ್ವಗಳಂತೆ ನಾವೆಲ್ಲ ಸಮಾಜಕ್ಕೆ ಮಾದರಿ ಆಗಬೇಕು ಇನ್ನು ಕೂಡ ಬಡ ಮತ್ತು ದುರ್ಬಲ ಬ್ರಾಹ್ಮಣ ಕುಟುಂಬಗಳು ನಮ್ಮ ನಡುವೆ ಇದ್ದಾರೆ ಅವರಿಗೆ ಸಂಘಟನೆಗಳು ಸಹಾಯ ಮಾಡಬೇಕು ಎಂದು ಹೇಳಿದರು.

ಉಪ್ಪುಂದ ವಲಯ ಅಧ್ಯಕ್ಷರಾದ ಸಂದೇಶ್ ಭಟ್ ಅವರು ಮಾತನಾಡಿಬ್ರಾಹ್ಮಣತ್ವ ಎನ್ನುವುದು ಜಾತಿಯಲ್ಲ, ಅರ್ಹತೆ. ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ಇಲ್ಲಿ ಹರಿದು ಬರಲಿ ಎನ್ನುವಂಥ ರಕ್ತ ನಮ್ಮದು. ಯಾರಿಗೆ ತನ್ನ ಬದುಕಿನ ಸೀಮಿತತೆಯನ್ನು ಮೀರಿ ಯೋಚನೆ ಮಾಡುವ ಅರ್ಹತೆ ಇದೆಯೋ ಅವನು ಬ್ರಾಹ್ಮಣನಾಗಬಲ್ಲ ಎಂದರು.

ವಿದ್ವಾನ್ ಮಂಜುನಾಥ್ ಭಟ್ ಹರೇಗೋಡು ಧಾರ್ಮಿಕ ಪ್ರವಚನವನ್ನು ನೆರವೇರಿಸಿಕೊಟ್ಟರು. ವಿಶೇಷವಾಗಿ ಮಧ್ಯಾಹ್ನ ಸಾಂಸ್ಕೃತಿಕ ವೈಭವ ಪ್ರಯುಕ್ತ ಹರಟೆ ,ನೃತ್ಯ ವೈಭವ, ಗೀತ ಗಾಯನ ಭರತನಾಟ್ಯ ,ಶ್ಲೋಕ ಪಟ್ಟಣ ,ಆಶುನಟನೆ ಯಕ್ಷ ನೃತ್ಯ , ಇತರೆ ಕಾರ್ಯಕ್ರಮ ವೇದಿಕೆಯಲ್ಲಿ ಸಂಭ್ರಮ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ರಾವ್ ತಾಲೂಕು ಉಪಾಧ್ಯಕ್ಷ ಗಣೇಶ್ ಮಯ್ಯ ಮಹಿಳಾ ವೇದಿಕೆ ಅಧ್ಯಕ್ಷರು ವೀಣಾ ಹೆಬ್ಬಾರ್, ಕೆ ಅರುಣ್ ಗೌರವಾಧ್ಯಕ್ಷರು, ಯೋಗೀಶ್ ಕಾರಂತ ಕೋಶಾಧಿಕಾರಿ, ಪದ್ಮನಾಭ ಹೆಬ್ಬಾರ್ ಅಧ್ಯಕ್ಷರು ಯುವ ವೇದಿಕೆ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. DT ಸೀತಾರಾಮ ಮಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಮಯ್ಯ ನಿರೂಪಿಸಿದರು

LEAVE A REPLY

Please enter your comment!
Please enter your name here