ಹಳೆಯಂಗಡಿ : ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ಮೈ ಭಾರತ್, ದ.ಕ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ತಾಲೂಕು ಮತ್ತು ಜಿಲ್ಲಾ ಯುವಜನ ಒಕ್ಕೂಟ. ದ.ಕ. ಇಲ್ಲಿ ನೋಂದಾಯಿಸಲ್ಪಟ್ಟಿದ್ದು, ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ ಹಾಗೂ ದ.ಕ.ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.) ತೋಕೂರು, ಹಳೆಯಂಗಡಿ ಇವರ ಆಶ್ರಯದಲ್ಲಿ ಪಡುಪಣಂಬೂರು ಮತ್ತು ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಕೂರು ದಿ| ಬೂಬ ದೇವಾಡಿಗರ ಸ್ಮರಣಾರ್ಥವಾಗಿ 36ನೇ ವರ್ಷದ ಆಹ್ವಾನಿತ ತಂಡಗಳ ಗ್ರಾಮೀಣ ಮಟ್ಟದ ಕ್ರೀಕೆಟ್ ಟೂರ್ನಿಯ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮವು ಮೇ.17ರಂದು ತೋಕೂರು ಮೈದಾನದಲ್ಲಿ ಜರುಗಲಿರುವುದು.
ಕಾರ್ಯಕ್ರಮದ ಉದ್ಘಾ ಟಣೆಯನ್ನು ರಮೇಶ್ ದೇವಾಡಿಗ ಮಾಡಲಿರುವರು, ಅಧ್ಯಕ್ಷತೆಯನ್ನು ಪಿ.ಸಿ.ಕೋಟ್ಯಾನ್ ವಹಿಸಲಿರುವರು, ಮುಖ್ಯ ಅತಿಥಿಗಳಾಗಿ ಮನೋಹರ್ ಶೆಟ್ಟಿ ಭಾಗವಹಿಸಲಿರುವರು, ವಿನೋದ್‌ಕುಮಾರ್, ನಾಗೇಶ್ ಶೆಟ್ಟಿಗಾರ್, ಮನೋಜ್‌ಕುಮಾರ್ ಉಪಸ್ಥಿತಲಿರುವರು.
ಸಂಜೆ 5-30ಕ್ಕೆ ಸಮಾರೋಪ ಸಮಾರಂಭ ನಡೆಯಲಿರುವುದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಂದರ ದೇವಾಡಿಗ,ಬಹುಮಾನ ವಿತರಣೆಯನ್ನು ರಾಮಣ್ಣ ದೇವಾಡಿಗ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಲ್ಲಾಸ್ ಕೆ.ಟಿ.ಕೆ., ಜಗದೀಶ್ ಕೆ., ರಂಜಿತ್ ಪೂಜಾರಿ, ರತ್ನಾಕರ ಸಿ.ಮೊಯಿಲಿ, ದಿನೇಶ್ ಕೋಟ್ಯಾನ್,ಯೋಗೀಶ್ ಕೋಟ್ಯಾನ್ ಭಾಗವಹಿಸಲಿರುವರು ಎಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

