ಮಂಗಳಮುಖಿ ಕೊಂದ ಮೂವರು ಆರೋಪಿಗಳು ಅರೆಸ್ಟ್..!

0
443


ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಮಂಗಳಮುಖಿ ತನುಶ್ರೀ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ.
ಜಗದೀಶ್ ಗೆ ತನ್ನ ಜೊತೆಗೆ ಇರುವಂತೆ ಮೃತ ತನುಶ್ರೀ ಒತ್ತಾಯಿಸುತ್ತಿದ್ದಂತೆ.ಅಲ್ಲದೇ ಬಲವಂತವಾಗಿ ತನ್ನನ್ನ ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಆರೋಪಿ ಕೃತ್ಯ ಎಸಗಿದ್ದಾನೆ. ಕೊಲೆ ಮಾಡಿದ ಬಳಿಕ ಪ್ರಮುಖ ಆರೋಪಿ ಜಗದೀಶ್ ತಿರುಪತಿಗೆ ಹೋಗಿದ್ದ. ತನಿಖೆ ಚುರುಕುಗೊಳಿಸಿದ ಪೊಲೀಸರು, ಪ್ರಮುಖ ಆರೋಪಿ ಸೇರಿ ಕೊಲೆ ಸಾಥ್ ಕೊಟ್ಟ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಜಗದೀಶ್, ಪ್ರಭಾಕರ್, ಸುಶಾಂತ್ ಬಂಧಿತ ಆರೋಪಿಗಳು ಎನ್ನಲಾಗಿದೆ.

ಏ.20ರಂದು ಮಂಗಳಮುಖಿಯ ತನುಶ್ರೀ ಮೃತದೇಹ ಮನೆಯಲ್ಲೇ ಪತ್ತೆಯಾಗಿತ್ತು. ಮೃತಪಟ್ಟ ಮೂರು ದಿನದ ಬಳಿಕ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.

ಸೋಷಿಯಲ್ ಸರ್ವೀಸ್ ಮಾಡುತ್ತಿದ್ದ ಜಗದೀಶ್ ಗೆ ತನುಶ್ರೀ ಪರಿಚಯವಾಗಿದೆ. ಹೀಗಾಗಿ ತನುಶ್ರೀ ಮತ್ತು ಜಗದೀಶ್ ಮಧ್ಯೆ ಸ್ನೇಹ ಇತ್ತು. ಒಂದೆರೆಡು ಬಾರಿ ಸೋಷಿಯಲ್ ಸರ್ವೀಸ್ ಉದ್ದೇಶದಿಂದ ಇಬ್ಬರು ಒಟ್ಟಿಗೆ ಪ್ರಯಾಣಿಸಿದ್ರು . ಆಗಾಗ ತನುಶ್ರೀ ಮನೆಗೆ ಕೂಡ ಜಗದೀಶ್ ಬರುತ್ತಿದ್ದ. ಆದರೆ ತನ್ನನ್ನ ಮದುವೆಯಾಗುವಂತೆ ತನುಶ್ರೀ ಬಲವಂತ ಮಾಡ್ತಿದ್ದ. ತನುಶ್ರೀ ಕಾಟಕ್ಕೆ ಬೇಸತ್ತು ಹೋಗಿದ್ದ ಜಗದೀಶ್, ಕೊಲೆ ಮಾಡಲು ನಿರ್ಧಾರ ಮಾಡಿದ್ದಾನೆ. ಧೈರ್ಯಕ್ಕಾಗಿ ತನ್ನಿಬ್ಬರು ಸ್ನೇಹಿತರನ್ನ ಜೊತೆಯಲ್ಲಿ ಇರೋದಕ್ಕೆ ಕರೆತಂದಿದ್ದ. ಅದರಂತೆ ಪ್ಲ್ಯಾನ್ ಮಾಡಿದ್ದ ಆರೋಪಿಗಳು, ಏ.17ರ ರಾತ್ರಿ ಮನೆಗೆ ಬಂದು ತನುಶ್ರೀಗೆ ಚಾಕು ಇರಿದು ಹತ್ಯೆ ಮಾಡಿದ್ದಾರೆ. ಹತ್ಯೆ ಬಳಿಕ ಫ್ಲಾನ್ ನಂತೆ ಪ್ರಮುಖ ಆರೋಪಿ ಜಗದೀಶ್ ಎಸ್ಕೇಪ್ ಆಗಿದ್ದ. ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿದ ಪೊಲೀಸರು, ಮೂವರನ್ನ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here