ಸಮಯದ ನಿರ್ವಹಣೆ, ಸಮರ್ಪಕ ಬೇಳೆಯಲ್ಲಿ ಸಮರ್ಪಕ ನಿರ್ಧಾರ ಅಗತ್ಯ-ದೀಕ್ಷಾ ಕುಮಾರಿ

0
128


ವರದಿ ರಾಯಿ ರಾಜ ಕುಮಾರ
ಶಿಕ್ಷಣ ಮತ್ತು ಕ್ರೀಡೆಗಳನ್ನು ಸಮಾನವಾಗಿ ವ್ಯವಸ್ಥಿತ ರೀತಿಯಲ್ಲಿ ಕೊಂಡು ಹೋಗುವ ಅಗತ್ಯ ಕ್ರೀಡಾಳುಗಳಿಗೆ ಇರುತ್ತದೆ. ಕ್ರೀಡೆ ನಮಗೆ ಸಮಯದ ನಿರ್ವಹಣೆಯನ್ನು, ಸರಿಯಾದ ವೇಳೆಯಲ್ಲಿ ಸಮರ್ಪಕವಾದ ನಿರ್ಧಾರಗಳನ್ನು ಕೈಗೊಳ್ಳುವಂತಹ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ನಾವು ಬೆಳೆಯಬೇಕಾದರೆ ಇತರರನ್ನು ಹುರಿದುಂಬಿಸುವ ಅಗತ್ಯ ಇರುತ್ತದೆ ಅದೇ ರೀತಿ ಗುಂಪಿನ ಬೆಂಬಲವು ಅಗತ್ಯ ಇರುತ್ತದೆ ಎಂದು ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ, ಕ್ರೀಡಾಳು ದೀಕ್ಷಾ ಕುಮಾರಿ ನುಡಿದರು. ಅವರು ನವೆಂಬರ್ 22ರಂದು ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ತೋಡಾರಿನ ಏನಪೋಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ವೇದಿಕೆಯಲ್ಲಿ ಏನಪೋಯ ಆಪರೇಷನ್ಸ್ ಗ್ರೂಪಿನ ಡೈರೆಕ್ಟರ್ ಅಬ್ದುಲ್ಲಾ ಜಾವೇದ್, ಕ್ಯಾಂಪಸ್ ಅಡ್ಮಿನಿಸ್ಟ್ರೇಟರ್ ಮಹಮ್ಮದ್ ಶಾಹಿದ್, ಕ್ರೀಡಾ ನಿರ್ದೇಶಕ ಲೋಕೇಶ್, ಉಪ ಪ್ರಾಚಾರ್ಯ ಪ್ರಭಾಕರ ಬಿಕೆ ಉಪಸ್ಥಿತರಿದ್ದರು.
1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಕ್ರೀಡಾಕೂಟದಲ್ಲಿ 400ಕ್ಕೂ ಹೆಚ್ಚು ಕ್ರೀಡಾಪಟುಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಇ ಸಿ ಇ ವಿಭಾಗವು ಪಥ ಸಂಚಲನದಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿತು. ಶಿರ್ತಾಡಿ ಭುವನ ಜ್ಯೋತಿ ಸಂಸ್ಥೆಯ ಬ್ಯಾಂಡ್ ಸೆಟ್ಟ್ ನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ವಾಂಚಿತಾ ಸ್ವಾಗತಿಸಿದರು. ಇಬ್ತಿಸಾನ್ ಕಾರ್ಯಕ್ರಮ ನಿರ್ವಹಿಸಿದರು. ತಾಸ್ಮಿಯ ವಾರ್ಷಿಕ ಕ್ರೀಡಾಕೂಟದ ವರದಿ ವಾಚಿಸಿದರು. ಸಂಜು ವಂದಿಸಿದರು.

LEAVE A REPLY

Please enter your comment!
Please enter your name here