ಇಂದು (ಜು.11) ವಿಶ್ವ ಜನಸಂಖ್ಯಾ ದಿನ

0
23

ಪ್ರತಿ ವರ್ಷ ಜುಲೈ 11ರಂದು ವಿಶ್ವದಾದ್ಯಂತ “ವಿಶ್ವ ಜನಸಂಖ್ಯಾ ದಿನ” ಎಂದು ಆಚರಿಸಲಾಗುತ್ತದೆ. ಏರುತ್ತಿರುವ ಜನಸಂಖ್ಯೆಯಿಂದಾಗುವ ಜಾಗತಿಕ ತೊಂದರೆ, ಸಮಸ್ಯೆ ಮತ್ತು ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ದಿನಾಂಕ ಜುಲೈ 11 1989ರಿಂದ ಜಾರಿಗೆ ತರಲಾಯಿತು.

ಕ್ಷಣಕ್ಷಣಕ್ಕೂ ಏರುತ್ತಿರುವ ಜನಸಂಖ್ಯೆ ಜಾಗತಿಕವಾದ ಬಹುದೊಡ್ಡ ಸಮಸ್ಯೆ ಎಂದರೂ ತಪ್ಪಲ್ಲ. ಒಂದು ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ ಪ್ರತೀ ದಿನ ೩,೫೩,೦೦೦ ಶಿಶುಗಳು ಜನಿಸುತ್ತವೆ. (ಪ್ರತೀ ನಿಮಿಷಕ್ಕೆ 255 ಮತ್ತು ಪ್ರತೀ ಕ್ಷಣಕ್ಕೆ ೫ ಶಿಶುಗಳ ಜನನ) ಆದರೆ ಪ್ರತೀ ದಿನ ಜಾಗತಿಕವಾಗಿ 1,53,೦೦೦ ವ್ಯಕ್ತಿಗಳು ಸಾವನ್ನಪ್ಪುತ್ತಾರೆ. (ಪ್ರತೀ ನಿಮಿಷಕ್ಕೆ 110 ಮತ್ತು ಪ್ರತೀ ಕ್ಷಣಕ್ಕೆ 2 ವ್ಯಕ್ತಿಗಳ ಮರಣ). ಕ್ಷಣಕ್ಷಣಕ್ಕೂ ಏರುತ್ತಿರುವ ಈ ಜನಸಂಖ್ಯೆಯನ್ನು ನಿಯಂತ್ರಿಸುವ ಅನಿವಾರ್ಯತೆ ಖಂಡಿತವಾಗಿಯೂ ಇದೆ.

ಇಲ್ಲವಾದಲ್ಲಿ ಪ್ರಾಥಮಿಕ ಮೂಲಭೂತ ಅವಶ್ಯಕತೆಗಳಾದ ಅನ್ನ, ನೀರು, ವಸತಿ, ವಿದ್ಯಾಭ್ಯಾಸ ಮತ್ತು ಆರೋಗ್ಯ ಅವಶ್ಯಕತೆಗಳನ್ನು ಪೂರೈಸುವುದು ಕಷ್ಟವಾಗಿ, ಭೂಮಂಡಲದಲ್ಲಿ ಜೀವಿಸುವುದೇ ಅಸಾಧ್ಯವಾಗಬಹದು. 1987 ಜುಲೈ 11ರಂದು ನಮ್ಮ ವಿಶ್ವದ ಜನಸಂಖ್ಯೆ ಅಧಿಕೃತವಾಗಿ 5 ಮಿಲಿಯನ್ (೫೦೦ಕೋಟಿ) ತಲುಪಿತು. ಜನರಲ್ಲಿ ಜನಸಂಖ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಮೇರಿಕಾ ಆಡಳಿತ ಪರಿಷತ್ತು 1989ರಂದು “ವಿಶ್ವ ಜನಸಂಖ್ಯೆ ದಿನದ ಆಚರಣೆಯನ್ನು ಜಾರಿಗೆ ತಂದಿತು.

2014 ಜನವರಿ 1ರ ಅಂಕಿಅಂಶಗಳ ಪ್ರಕಾರ ವಿಶ್ವದ ಜನಸಂಖ್ಯೆ 7,137,661,030 ( ಸುಮಾರು 713 ಕೋಟಿ). 2015 ಜನವರಿ 1ರ ಜನಗಣತೆಯಂತೆ ಈ ಜನಸಂಖ್ಯೆ 7,145,980,೦೦೦ ಎಂದು ತಿಳಿದು ಬಂದಿದೆ. (ಸುಮಾರು ಏಳುನೂರು ಹದಿನಾಲ್ಕು ಕೋಟಿ) ಈ ಜನಸಂಖ್ಯೆಯಲ್ಲಿ ಸುಮಾರು 90 ಶೇಕಡಾ ಮಂದಿ ಏಷ್ಯಾ ಖಂಡದಲ್ಲಿ ವಾಸಿಸುತ್ತಾರೆ. ವಿಶ್ವ ಜನಸಂಖ್ಯೆಯ ೫೦ ಶೇಕಡಾ ಮಂದಿ ಚೀನಾದಲ್ಲಿ 18ಶೇಕಡಾ ಮಂದಿ ಭಾರತದಲ್ಲಿ, ೧೨ಶೇಕಡಾ ಮಂದಿ ಆಪ್ರಿಕಾ ದೇಶದಲ್ಲಿ, 11 ಶೇಕಡಾ ಮಂದಿ ಯುರೋಪ್ ದೇಶದಲ್ಲಿ, 8 ಶೇಕಡಾ ಮಂದಿ ಉತ್ತರ ಆಮೇರಿಕಾದಲ್ಲಿ ಮತ್ತು 5.5 ಶೇಕಡಾ ಮಂದಿ ದಕ್ಷಿಣ ಅಮೇರಿಕಾದಲ್ಲಿ ವಾಸಿಸುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ನಮ್ಮ ಕರ್ನಾಟಕದಲ್ಲಿ ಸುಮಾರು ೭ ಕೋಟಿ ಜನ ಸಂಖ್ಯೆ ಇದ್ದು, ಭಾರತದ ಜನಸಂಖ್ಯೆ ೧೪೦ ಕೋಟಿಗಿಂತಲೂ ಜಾಸ್ತಿಯಾಗಿವುದಂತೂ ಸತ್ಯ. ಜನಸಂಖ್ಯೆ ಜಾಸ್ತಿಯಾದಂತೆ ಮೂಲಭೂತ ಅವಶ್ಯಕತೆಗಳು ಮತ್ತು ಸೌಲಭ್ಯಗಳು ದೊರಕದಿರುವುದೇ ಬಹುದೊಡ್ಡ ವಿರ‍್ಯಾಸ. ಇದರಿಂದಾಗಿ ನೂರಾರು ಸಮಸ್ಯೆಗಳಿಗೆ ನಾಂದಿ ಹಾಡಿದೆ. ಒಂದು ದೇಶದ ಪ್ರಗತಿ ಮತ್ತು ಪರಿಪೂರ್ಣ ಬೆಳವಣಿಗೆಗೆ ಮನುಷ್ಯ ಸಾಮರ್ಥ್ಯ ಎಷ್ಟು ಅಗತ್ಯವೋ ಅಷ್ಟೇ ರೀತಿಯಲ್ಲಿ ಏರುತ್ತಿರುವ ಜನಸಂಖ್ಯೆ ಕೂಡಾ ಬೆಳವಣಿಗೆಗೆ ಕಡಿವಾಣ ಹಾಕುತ್ತದೆ ಎನ್ನುವುದು ವಿರ‍್ಯಾಸವಾದರೂ ನಂಬಲೇಬೇಕಾದ ಸತ್ಯ. 1987 ಜುಲೈ 11ರಂದು 500ಕೋಟಿ ತಲುಪಿದ್ದ ವಿಶ್ವದ ಜನಸಂಖ್ಯೆ ೨೦೧೫ರಲ್ಲಿ ಅಂದರೆ ಕೇವಲ 28 ವರ್ಷಗಳಲ್ಲಿ ಏಳುನೂರ ಹದಿನೈದು ಕೋಟಿಗೆ ತಲುಪಿರುವುದು ಬಹಳ ಸೋಜಿಗದ ಸಂಗತಿ. ಮತ್ತು ಕಡಿವಾಣ ಹಾಕದಿದ್ದಲ್ಲಿ ೨೦೫೦ರಲ್ಲಿ ಒಂದೂಸಾವಿರ ಕೋಟಿ ತಲುಪಿದರೂ ಆಶ್ಚರ್ಯವಲ್ಲ.

ಜನಸಂಖ್ಯಾ ದಿನಾಚರಣೆಯ ಧ್ಯೇಯಗಳು

ಯುವ ಜನರನ್ನು ರಕ್ಷಿಸಲು ಮತ್ತು ಸಬಲೀಕರಣಗೊಳಿಸಲು ಮತ್ತು ಗಂಡು ಹೆಣ್ಣಿನ ಅನುಪಾತವನ್ನು ಕಾಯ್ದುಕೊಳ್ಳುವ ಸದುದ್ದೇಶ ಹೊಂದಿದೆ.

ಬಾಲ್ಯವಿವಾಹವನ್ನು ತಪ್ಪಿಸಿ ತಮ್ಮ ಜೀವನದ ಗುರಿ ಮತ್ತು ಉದ್ದೇಶಗಳ ಬಗ್ಗೆ ಅರಿವು ಮೂಡಿಸುವುದಾಗಿದೆ.

ಯುವ ಜನರಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಸೆಕ್ಸ್ ವಿಚಾರ ಧಾರೆಯನ್ನು ಮನಗತಮಾಡುವುದಾಗಿದೆ.

ಲಿಂಗ ತಾರತಮ್ಯದ ಧೋರಣೆಯನ್ನು ಕಡಿಮೆ ಮಾಡುವುದು

ಸಣ್ಣ ವಯಸ್ಸಿನಲ್ಲಿ ಗರ್ಭಧರಿಸದಂತೆ ಜಾಗೃತಿ ಮೂಡಿಸಲು ಮತ್ತು ಬಾಲ್ಯ ವಿವಾಹ ಮತ್ತು ಸಣ್ಣ ವಯಸ್ಸಿನಲ್ಲಿ ತಾಯಿಯಾಗುವುದಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವುದು.

ಅನಾರೋಗ್ಯಕರವಾದ ಸೆಕ್ಸ್ನಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು.

ಗಂಡು ಹೆಣ್ಣು ಮಕ್ಕಳಿಗೆ ತಾರತಮ್ಯ ಮಾಡದೆ ಇಬ್ಬರಿಗೂ ಪ್ರಾಥಮಿಕ ಸೌಲಭ್ಯಗಳು ಮತ್ತು ವಿದ್ಯಾಭ್ಯಾಸ ಒದಗಿಸುವ ಬಗ್ಗೆ ಮನವರಿಕೆ ಮಾಡಿಸುವುದು.

ಹೆಣ್ಣು ಮಗುವಿನ ಕಾನೂನು ಬಾಹಿರ ಭ್ರೂಣ ಹತ್ಯೆಯನ್ನು ನಿಲ್ಲಿಸಲು ಮತ್ತು ಗಂಡು ಹೆಣ್ಣಿನ ಸರಿಯಾದ ಅನುಪಾತ ಉಂಟಾಗಲು ಪೂರಕವಾದ ವಾತಾವರಣ ನಿರ್ಮಿಸುವ ಉದ್ದೇಶ ಇದೆ.

ಡಾ|| ಮುರಲೀ ಮೋಹನ್ ಚೂಂತಾರು

LEAVE A REPLY

Please enter your comment!
Please enter your name here