ಅಪಾಯಕಾರಿ ಗುಂಡ್ಯಡ್ಕ ಎರುಗುಂಡಿ ಫಾಲ್ಸ್ ನಿಷೇಧ ಇದ್ದರೂ ಪ್ರವಾಸಿಗರ ನಿರ್ಲಕ್ಷ್ಯ

0
68

ಮೂಡುಬಿದಿರೆ: ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕದ ಎರುಗುಂಡಿ ಫಾಲ್ಸ್ ಈಗ ವೀಕ್ಷಕರನ್ನು ಸೆಳೆಯುತ್ತಲಿದೆ. ರಜಾದಿನಗಳಲ್ಲಿ ವಿಶೇಷವಾಗಿ ರವಿವಾರ ಇಲ್ಲಿಗೆ ದೂರದೂರಿನವರು, ನಗರದ ಯುವಜನರ ದಂಡೇ ಬರುತ್ತಾ ಇವೆ. ಆದರೆ ಈ ತಾಣ ಅತ್ಯಂತ ಅಪಾಯಕಾರಿಯಾಗಿದ್ದು, ಎಚ್ಚರ ತಪ್ಪಿದರೆ ಜೀವಾಪಾಯ ಸಂಭವವಿದೆ ಆತಂಕವಿದೆ.

ಅದೇ ಕಾರಣಕ್ಕೆ ಅಪಾಯಕಾರಿ ಗುಂಡ್ಯಡ್ಕ ಫಾಲ್ಸ್ ನ 100 ಮೀಟರ್ ವ್ಯಾಪ್ತಿಯಲ್ಲಿ ಸಾವ೯ಜನಿಕ ವೀಕ್ಷಣೆಯನ್ನು ನಿಷೇಧಿಸಿದ್ದು ತಪ್ಪಿದ್ದಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಪುತ್ತಿಗೆ ಗ್ರಾ. ಪಂಚಾಯತ್ ವತಿಯಿಂದ ಎಚ್ಚರಿಕೆಯ ಬ್ಯಾನರನ್ನು ಫಾಲ್ಸ್ ಬಳಿ ಹಾಕಲಾಗಿದೆ.

ಇಲ್ಲಿ ಈ ಹಿಂದೆಯೂ ಜೀವಾಪಾಯಗಳಾದ ಉದಾಹರಣೆಗಳಿವೆ. ಪ್ರವಾಸಿಗರನ್ನು ನಾವು ತಡೆಯಲು ಮುಂದಾದರೆ ‘ನಾವು ಇದೇ ಊರಿನರು, ಇಲ್ಲವೇ ಮೂಡುಬಿದಿರೆಯ ಕಾಲೇಜಿನವರು’ ಎಂದು ಹೇಳಿಕೊಂಡು ಫಾಲ್ಸ್‌ನತ್ತ ಧಾವಿಸುತ್ತಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಭಾನುವಾರ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಜಲಪಾತ ವೀಕ್ಷಿಸಲು ಆಗಮಿಸುತ್ತ ಇರುವುದರಿಂದ ಪೋಲಿಸ್‌ ರಕ್ಷಣಾ ವ್ಯವಸ್ಥೆ ಬಲಪಡಿಸಲೇ ಬೇಕಾಗಿದೆ. ಎನ್ನುತ್ತಾರೆ ಸ್ಥಳೀಯರು.

LEAVE A REPLY

Please enter your comment!
Please enter your name here