ಗುಂಡ್ಯಡ್ಕ ಫಾಲ್ಸ್ ನಲ್ಲಿ ಪ್ರವಾಸಿಗರ ದಂಡು: ಪೊಲೀಸರಿಂದ ಎಚ್ಚರಿಕೆ ಜನಜಂಗುಳಿ

0
384

ಮೂಡುಬಿದಿರೆ: ಕಳೆದ ವಾರ ನೀರುಪಾಲಾಗುತ್ತಿದ್ದ ಐವರು ಯುವಕರನ್ನು ರಕ್ಷಿಸಿದ ಎರುಗುಂಡಿ ಫಾಲ್ಸ್ನಲ್ಲಿ ವಾರಾಂತ್ಯವಾದ ವಾರಂತ್ಯದಲ್ಲಿ ಜನಜಂಗುಳಿ ಕಂಡುಬಂದಿದೆ. ಅಪಾಯಕಾರಿ ಸೂಚನೆಯನ್ನು ನಿರ್ಲಕ್ಷಿಸಿ ಹೆಚ್ಚಿನ ಸಂಖ್ಯೆ ಯುವಕ ಯುವತಿಯರು ಮೋಜು ಮಸ್ತಿಯಲ್ಲಿ ತೊಡಗಿದ್ದರು.
ಸ್ಥಳೀಯರು ನೀಡಿದ ದೂರಿಗೆ ಸ್ಪಂದಿಸಿದ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ತಕ್ಷಣ ಪೊಲೀಸರನ್ನು ಪ್ರದೇಶಕ್ಕೆ ಕಳುಹಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಸಂದೀಪ್, ಬಂದ ಪ್ರವಾಸಿಗರಿಗೆ ಅಪಾಯಕಾರಿ ಸ್ಥಳದ ಬಗ್ಗೆ ಜಾಗೃತಿ ಮೂಡಿಸಿದಲ್ಲದೇ, ಮಳೆಗಾಲದಲ್ಲಿ ಬರದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.


ಮಳೆಗಾಲದಲ್ಲಿ ಅಪಾಯಕಾರಿಯಾಗಿರುವ ಗುಂಡ್ಯಡ್ಕ ಫಾಲ್ಸ್ನ 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ವೀಕ್ಷಣೆಯನ್ನು ನಿಷೇಧಿಸಿದ್ದು, ತಪ್ಪಿದ್ದಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಪುತ್ತಿಗೆ ಗ್ರಾಮ ಪಂಚಾಯಿತಿ ಕಳೆದ ಐದು ದಿನಗಳ ಹಿಂದೆ ಎಚ್ಚರಿಕೆ ಬ್ಯಾನರ್ ಅನ್ನು ಫಾಲ್ಸ್ಗೆ ಬರುವ ದಾರಿ ಹಾಗೂ ಪರಿಸರದಲ್ಲಿ ಅಳವಡಿಸಿದ್ದರೂ ಭಾನುವಾರ ಮಧ್ಯಾಹ್ನ ನಂತರ ನೂರಕ್ಕೂ ಅಧಿಕ ಮಂದಿ ಮೂಡುಬಿದಿರೆ ಮಾತ್ರವಲ್ಲದೆ ಮಂಗಳೂರು, ಪುತ್ತೂರು, ಕಾಸರಗೋಡು, ಉಡುಪಿ ಭಾಗಗಳಿಂದ ಬಂದು ಮೋಜು ಮಸ್ತಿಯಲ್ಲಿ ತೊಡಗಿದ್ದರು.
ಮೇ.25ರಂದು ಮಂಗಳೂರಿನ ಐವರು ಯುವಕರು ಅಪಾಯಕಾರಿ ಪ್ರದೇಶದಲ್ಲಿ ನೀರಿಗಿಳಿದು ಆಟವಾಡುತ್ತಿದ್ದ ವೇಳೆ ನೀರುಪಾಲಾಗುವುದರಲ್ಲಿದ್ದರ. ಇದನ್ನು ಗಮನಿಸಿದ ಸ್ಥಳೀಯರಾದ ಕಂಚಿಬೈಲಿನ ಲತೇಶ್, ಸಂದೀಪ್, ಸುರೇಶ್, ಗಣೇಶ್, ಪ್ರವೀಣ್ ಹಾಗೂ ಕೊಡ್ಯಡ್ಕದ ಪ್ರವೀಣ್ ಅವರನ್ನು ರಕ್ಷಿಸಿದ್ದರು. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿದ್ದರೂ, ಅದನ್ನು ಕಡೆಗಣಿಸಿ ಇಲ್ಲಿ ಹೆಚ್ಚಿನ ಜನ ಸೇರುವುದು ಕಂಡುಬಂದಿದೆ.
ಸ್ಥಳೀಯರಾದ ಜಗದೀಶ್ ಪೂಜಾರಿ ಪಾಲಡ್ಕ ಮಾತನಾಡಿ, ಪ್ರತಿ ಅಪಾಯಕಾರಿಯಾಗಿ ಫಾಲ್ಸ್ ನಲ್ಲಿ ಕಳೆದ ಐದಾರು ವರ್ಷಗಳಲ್ಲಿ ಐವರು ಈ ಸ್ಥಳದಲ್ಲಿ ಜೀವ ಕಳೆದುಕೊಂಡಿದ್ದರೆ. ಸುರಕ್ಷಿತ ಕ್ರಮ ಕೈಗೊಳ್ಳುವವರೆಗೆ ಇಲ್ಲಿ ಸಾರ್ವಜನಿಕರ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here