ಕುಂದಾಪುರದಲ್ಲಿ ಡಿ. 11ರಿಂದ 13 ರ ತನಕ ಟೌನ್ ಟ್ರೋಫಿ 2026 ಕ್ರಿಕೆಟ್ ಪಂದ್ಯಾವಳಿ

0
5

ಕುಂದಾಪುರ: ಪರ್ವೇಜ್ ನಾಗೂರು ಅವರ ಸ್ಮರಣಾರ್ಥ ಮುನಾಫ್ ಹೆಮ್ಮಾಡಿ ಮತ್ತು ಇಮ್ರಾನ್ ಹೆಮ್ಮಾಡಿ ಅವರ ಮಾರ್ಗದರ್ಶನದಲ್ಲಿ ಪಾಂಚಜನ್ಯ ನಿತೀಶ್ ಶೆಟ್ಟಿ ಸಾರಥ್ಯದಲ್ಲಿ ಟೌನ್ ಕ್ರಿಕೆಟರ್ಸ್ ಹೆಮ್ಮಾಡಿ ಇವರು ಆಯೋಜಿಸುವ ಟೌನ್ ಟ್ರೋಫಿ 2026 ರಾಜ್ಯಮಟ್ಟದ 60 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಡಿಸೆಂಬರ್ 11, 12 ಮತ್ತು 13ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.

ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವಾಗಿ ₹4,10,786 ಹಾಗೂ ದ್ವಿತೀಯ ಬಹುಮಾನವಾಗಿ ₹2,10,786 ನಗದು ಬಹುಮಾನ ನೀಡಲಾಗುವುದು.
ಅಲ್ಲದೆ ಪಂದ್ಯಾವಳಿಯ ಸರಣಿಶ್ರೇಷ್ಠ ಆಟಗಾರನಿಗೆ ಬೈಕ್ ಬಹುಮಾನವಾಗಿ ನೀಡಲಾಗುತ್ತದೆ.
ಅತ್ಯುತ್ತಮ ಬ್ಯಾಟ್ಸ್‌ಮನ್ ಹಾಗೂ ಅತ್ಯುತ್ತಮ ಬೌಲರ್‌ಗೆ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಲಾಗುವುದು.
ಉತ್ತಮ ಫೀಲ್ಡರ್ ಹಾಗೂ ಉತ್ತಮ ಕೀಪರ್ ಗೆ ಕೊನೆಯ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಗೆ ಬೆಳ್ಳಿಯ ನಾಣ್ಯವನ್ನು ಬಹುಮಾನವಾಗಿ ನೀಡಲಾಗುವುದು.

ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ ₹35,000 ನಿಗದಿಪಡಿಸಲಾಗಿದೆ.
ಪರ್ವೇಜ್ ನಾಗೂರು ಅವರ ಸ್ಮರಣಾರ್ಥವಾಗಿ ಆಯೋಜಿಸಿರುವ ಈ ಪಂದ್ಯಾವಳಿಗೆ ಕ್ರೀಡಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 72596 77795, 96117 12546, 86600 39258.