ಕೇರಳ ಕರ್ನಾಟಕ ತುಲುನಾಡಿನ ಗಡಿ ಪ್ರದೇಶದ ಕಣ್ವತೀರ್ಥ ಮಠದಲ್ಲಿ ಶ್ರೀ ರಾಮನವಮಿ ರಥೋತ್ಸವದ ದಿನದಂದು,ಜೈ ತುಳುನಾಡ್ ಕಾಸರಗೋಡು ವಲಯದ ಸಹಾಕಾರದಿಂದ ಶ್ರೀ ರಾಮಾಂಜನೇಯ ಮಾತೃ ಮಂಡಳಿಯವರು ಶ್ರೀ ಕಣ್ವತೀರ್ಥ ಮಠಕ್ಕೆ ತುಲು ಲಿಪಿ ನಾಮ ಫಲಕವನ್ನು ಅಳವಡಿಸಿದರು.

ಈ ಸಂದರ್ಭದಲ್ಲಿ ಮಾತೃ ಮಂಡಳಿ ಹಾಗೂ ಶ್ರೀ ರಾಮಾಂಜನೇಯ ಸೇವಾ ಸಮಿತಿಯ ಅಧ್ಯಕ್ಷರೂ ಆದ ಶ್ರೀಮತಿ ಪ್ರೇಮಾ ಎಂ ಹೊನ್ನೆ, ಸಮಿತಿಯ ಕಾರ್ಯದರ್ಶಿ ದಯಾನಂದ ಕಣ್ವತೀರ್ಥ,ಆನಂದ ಸಾಲಿಯಾನ್, ಪ್ರದ್ಯುಮ್ನ ಭಟ್,ಆರ್.ಬಿ.ಉಧ್ಯಾವರ್ ಮತ್ತು ಜೈ ತುಲುನಾಡ್ ಕಾಸರಗೋಡು ವಲಯ ಸಮಿತಿಯ ಅಧ್ಯಕ್ಷೆ ಶ್ರೀಮತಿ ಕುಶಲಾಕ್ಷಿ ಕಣ್ವತೀರ್ಥ, ಹಾಗೂ ಆಂಜನೇಯ ಬಾಲ ಗೋಕುಲದ ಮಕ್ಕಳು ಉಪಸ್ಥಿತರಿದ್ದರು