ಉಡುಪಿ : ತುಳುನಾಡು, ತುಳುವರ ಸೇವೆ ಹಾಗೂ ತುಳು ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಯ ಸಂಕಲ್ಪದೊಂದಿಗೆ ನಮ್ಮ ತುಳುನಾಡ ಪರಿಷತ್ನ ಧ್ವಜಾರೋಹಣ ಕಾರ್ಯಕ್ರಮವು ಅಕ್ಟೋಬರ್ 11ರಂದು ಉಡುಪಿಯ ರಿಗಲ್ ನೆಕ್ಸ್ಟ್ ನೆಲಮಹಡಿಯಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಅದ್ದೂರಿಯಾಗಿ ನಡೆಯಿತು.

ನಮ್ಮ ತುಳುನಾಡ ಪರಿಷತ್ನ ಸಂಸ್ಥಾಪಕ ಅಧ್ಯಕ್ಷರಾದ ರೋಹಿತ್ ಕರಂಬಳ್ಳಿ ಅವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತುಳುನಾಡಿನ ಪರಂಪರೆ, ತುಳು ಭಾಷೆ ಹಾಗೂ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಸಂಘಟಿತ ಪ್ರಯತ್ನಗಳ ಮಹತ್ವವನ್ನು ವಿವರಿಸಿದರು.
ಸ್ಥಾಪಕಾಧ್ಯಕ್ಷರಾಗಿ ರೋಹಿತ್ ಕರಂಬಳ್ಳಿ, ಜಿಲ್ಲಾಧ್ಯಕ್ಷರಾಗಿ ಜಯರಾಮ್ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಹಾರಿಸ್,ಉಪಾಧ್ಯಕ್ಷರಾಗಿ
ಮೋಹನ್ ಕಲ್ಮಾಡಿ ನೇಮಕ





ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಅಧ್ಯಕ್ಷರಾದ ಜಯರಾಮ್ ಪೂಜಾರಿ ಅವರು ತುಳುನಾಡಿನ ವೈಶಿಷ್ಟ್ಯ, ತುಳು ಭಾಷೆಯ ಶ್ರೀಮಂತಿಕೆ ಹಾಗೂ ತುಳುವರ ಆಚಾರ-ವಿಚಾರ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯದ ಕುರಿತು ಮಾತನಾಡಿದರು.

ಜಿಲ್ಲಾ ಪದಾಧಿಕಾರಿ ಮೊಹಮ್ಮದ್ ಹಾರಿಸ್ ಸ್ವಾಗತಿಸಿದರು. ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಕಲ್ಮಾಡಿ ವಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಹರೀಶ್ ಮೂಡಬೆಟ್ಟು, ರಮೇಶ್ ಕುಂದರ್, ರೋಷನ್, ಮಹಿಳಾ ಘಟಕದ ಮಮತಾ ಅಮೀನ್, ಆಶಾ ಕೊಡವೂರು, ಶೈನಾ ಮೊಂತಿಸ್, ಸೌಮ್ಯ ಮಲ್ಪೆ ಸೇರಿದಂತೆ ಪರಿಷತ್ನ ಇತರ ಸದಸ್ಯರು ಉಪಸ್ಥಿತರಿದ್ದರು.

