ತುಳುನಾಡ ತುಳುವೆರ್ , ಕಲ್ಯಾಣ್: ಮಹಿಳಾ ವಿಭಾಗದಿಂದ ಗಣಪತಿ ಪ್ರತಿಷ್ಠೆ ಹಾಗೂ ಭಜನೆ

0
30

ಕಲ್ಯಾಣ್: ಕಲ್ಯಾಣ್ ಪೂರ್ವದ ಹನುಮಾನ್ ನಗರದ ಸಾಯಿನಾಥ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿ ಸಭಾಗ್ರಹದಲ್ಲಿ ಶ್ರೀ ಗಣೇಶೋತ್ಸವದ ಅಂಗವಾಗಿ ಭಜನೆ ಕಾರ್ಯಕ್ರಮ ನಡೆಯಿತು . ಈ ಸಂದರ್ಭದಲ್ಲಿ ತುಳುನಾಡ ತುಳುವೆರ್ , ಕಲ್ಯಾಣ್ ಇದರ ಸಂಸ್ಥಾಪಕ ಅಶೋಕ್ ಎಲ್ . ಪೂಜಾರಿ ಉಲ್ಯ ಗುತ್ತು ಪಂಜ – ಕೊಯಿಕುಡೆ ಇವರನ್ನು ಶಾಲು ಹೊದೆಸಿ ಸನ್ಮಾನ ಮಾಡಲಾಯಿತು .

ಭಜನಾ ಕಾರ್ಯಕ್ರಮದಲ್ಲಿ ಪದ್ಮಾ ಸುವರ್ಣ ಮತ್ತು ತುಳುನಾಡ ತುಳುವೆರೆ, ಕಲ್ಯಾಣ್ ಇದರ ಮಹಿಳಾ ಸದಸ್ಯೆರುಗಳಾದ ಅಂಜನಾ ಪೂಜಾರಿ , ಸುಮಿತ್ರ ಪೂಜಾರಿ, ಶ್ರೀಮತಿ ಸುವರ್ಣ , ಬಿನಾ ಸಾಲಿಯಾನ್‌, ಶಶಿ ಪೂಜಾರಿ , ಶಾಲಿನಿ ಪೂಜಾರಿ , ಸಂಧ್ಯಾ ಸುವರ್ಣ , ದೀಪ ಪೂಜಾರಿ , ಸರೋಜಿನಿ ಪೂಜಾರಿ , ಖುಷಿ ಸಾಲಿಯಾನ್ , ಚಂದ್ರಾವತಿ ಕೋಟಿಯನ್ , ಪೂಜಾ , ಗಣೇಶ್ ಸುವರ್ಣ , ಭಾಸ್ಕರ್ ಸುವರ್ಣ , ಮಂಗೇಶ್ ಪೂಜಾರಿ , ಚೇತನ್ ಪೂಜಾರಿ , ದರ್ಶನ್ ಪೂಜಾರಿ , ನಂದೀಶ್ ಪೂಜಾರಿ , ಪವನ್ ಪೂಜಾರಿ , ಮೆಹೆಕ್ ಕನ್ಸರೆ ಮತ್ತು ಪ್ರಮೋದ್ ಸಾಲಿಯಾನ್ ಉಪಸ್ಥಿತರಿದ್ದರು. ಭಜನೆ ಕಾರ್ಯಕ್ರಮದ ನಂತರ ಮಂಗಳಾರತಿ , ತೀರ್ಥ ಪ್ರಸಾದ ವಿತರಣೆ ಮತ್ತು ಭೋಜನ ನಡೆಯಿತು.

LEAVE A REPLY

Please enter your comment!
Please enter your name here