ಉಡುಪಿ: ತೋನ್ಸೆ ಹೆಲ್ತ್ ಸೆಂಟರ್ ನಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

0
63

ತೋನ್ಸೆ ಹೆಲ್ತ್ ಸೆಂಟರ್ ಹಾಗೂ ಬೈಕಾಡಿ ಹಸನ್ ಸಾಹೇಬ್ ಮೆಮೊರಿಯಲ್ ಚಾರಿಟಬಲ್ ಟ್ರಸ್ಟ್ (ರಿ) ಇವರ ಒತಿಯಿಂದ ಹೆಲ್ತ್ ಸೆಂಟರ್ ಸಭಾ ಭವನದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಪ್ಥಾಪಕರಾದ ಬಿ. ಎಂ.ಜಾಫರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾಪರಿಷದ್ ಸದಸ್ಸಯ ಜನಾರ್ಧನ ತೋನ್ಸೆ,ಕೆಮ್ಮಣ್ಣು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕುಸುಮ ರವೀಂದ್ರ,ರಿಟೈರ್ಡ್ ಪ್ರಿನ್ಸಿಪಾಲ್ ಢಾ. ಜೆರಾಲ್ಡ್ ಪಿಂಟೋ,ಮುಸ್ತಾಕ್ ಬೆಳ್ವೆ, ಮೊಹಮ್ಮದ್ ಇಮ್ತಿಯಾಜ್,ರಮೇಶ್ ಕಾಮತ್ ಮಾಹೇ ಮಣಿಪಾಲ,ಬೈಕಾಡಿ ಹುಸೈನ ಸಾಹೇಬ್ ಮತ್ತು ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರುತ ಮೇಡಂ ಉಪಸ್ಥಿತರಿದ್ದರು.ಅತಿಥಿಗಳ ಹಾಗೂ ಊರ ಪರವೂರ ಅಭಿಮಾನಿಗಳ ಮತ್ತು ಸಂಸ್ಥೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀಮಾನ್ ರಮೇಶ್ ತಿಂಗಳಾಯ, ಡಾ.ಹಾಜಿ ಅಬ್ದುಲ್ ವಾಹಿದ್,ರೆಜಿನಾಲ್ಡ್ ಪೂರ್ತಡೋ ಹಾಗೂ ಹೆಸರಾಂತ ಕ್ರಿಕೆಟ್ ಆಟಗಾರ ಯಾದವ್ ನಾಯಕ್ ಕೆಮ್ಮಣ್ಣು ಇವರನ್ನೂ ಶಾಲು ಹೊದಿಸಿ ಗೌರವ ಪತ್ರದೊಂದಿಗೆ ಗೌರವಿಸಲಾಯಿತು.ಗೌರವಿತರ ಪರಿಚಯ ಹಾಗೂ ಗೌರವ ಪತ್ರವನ್ನು ಡಾ.ಶ್ರುತ ಅವರು ವಾಚಿಸಿದರು.ಸಂಸ್ಥೆಯ ಐದು ಉದ್ಯೋಗಿಗಳನ್ನು ಅವರ ಉತ್ತಮ ಸೇವೆಗಾಗಿ ವರ್ಷದ ಉದ್ಯೋಗಿ ಪ್ರಮಾಣ ಪತ್ರ ಮತ್ತು ನಗದು ಬಹುಮಾನದೊಂದಿಗೆ ಗಣ್ಯರ ಉಪಸ್ಥಿಯಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ಹರೀಶ್ ಶೆಟ್ಟಿವ್ ಕಾರ್ಯಕ್ರಮದ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here