ಮಾ.01 – 07ರವರೆಗೆ ಬೋಳ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವರ ದಿವ್ಯ ಸನ್ನಿಧಾನದಲ್ಲಿ ವರ್ಷಾವಧಿ ಬ್ರಹ್ಮರಥೋತ್ಸವ ಹಾಗೂ ಬೋಳದ ಅಯನೋತ್ಸವ

0
109

ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನ, ಬೋಳ ಎಂಬಲ್ಲಿ ದಿನಾಂಕ 01-03-2026ರಿಂದ 07-03-2026ರವರೆಗೆ ವರ್ಷಾವಧಿ ಬ್ರಹ್ಮರಥೋತ್ಸವ ಹಾಗೂ ಬೋಳದ ಅಯನೋತ್ಸವವು ಜರುಗಲಿದೆ.

ವೈದಿಕ ಕಾರ್ಯಕ್ರಮಗಳ ವಿವರ

ದಿನಾಂಕ : 01-03-2026ನೇ ರವಿವಾರದಂದು ಬೆಳಿಗ್ಗೆ ಗಂಟೆ 10.00ಕ್ಕೆ ಬೋಳ ಪಿಲಿಯೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ ಹೊರಟು ಸೋಮನಾಥೇಶ್ವರ ದೇವಸ್ಥಾನಕ್ಕೆ ಆಗಮಿಸಿ ಬಳಿಕ ಉಗ್ರಾಣ ಮುಹೂರ್ತ ಸಂಜೆ 6.00ರಿಂದ ಭಜನೆ – ಬ್ರಹ್ಮ ಬೈದರ್ಕಳ ಭಜನಾ ಮಂಡಳಿ, ಬೋಳ ರಾತ್ರಿ ಅಂಕುರಾರೋಪಣೆ ನಡೆಯಲಿದೆ.

02-03-2026ನೇ ಸೋಮವಾರದಂದು ಬೆಳಿಗ್ಗೆ ಗಂಟೆ 11.30ಕ್ಕೆ ಧ್ವಜಾರೋಹಣ, ಬಲಿ ಉತ್ಸವ, ಮಹಾಪೂಜೆ, ಅನ್ನಸಂತರ್ಪಣೆ ಸಂಜೆ 6.00ರಿಂದ ಭಜನೆ – ಶ್ರೀ ದುರ್ಗಾ ರಾಘವೇಂದ್ರ ಮಹಿಳಾ ಭಾಜನಾ ಮಂಡಳಿ, ಮುಂಡ್ಕೂರು ರಾತ್ರಿ ಬಲಿ ಉತ್ಸವ, ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ 9.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

ದಿನಾಂಕ : 03-03-2026ನೇ ಮಂಗಳವಾರದಂದು ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ-ಪ್ರಸಾದ ವಿತರಣೆ-ಉಪಹಾರ ನಡೆಯಲಿದೆ. ಸಂಜೆ 6.00ರಿಂದ ಭಜನೆ – ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ಭಜನಾ ಮಂಡಳಿ, ಬೋಳ ರಾತ್ರಿ ಬಲಿ ಉತ್ಸವ, ಮಹಾಪೂಜೆ, ಅನ್ನಸಂತರ್ಪಣೆ, ಬಾಕಿಮಾರು ಚೆಂಡು ರಾತ್ರಿ 9.00ಕ್ಕೆ ಯಕ್ಷಗಾನ ನಡೆಯಲಿರುವುದು.

04-03-2026ನೇ ಬುಧವಾರದಂದು ಬೆಳಗ್ಗೆ 9.00ರಿಂದ ಸಾಮೂಹಿಕ ಸಂಜೀವಿನಿ ಮೃತ್ಯುಂಜಯ ಹೋಮ, ಪೂರ್ಣಾಹುತಿ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00ರಿಂದ ಭಜನೆ – ಶಿಲ್ಪಾಶ್ರೀ ಭಜನಾ ಮಂಡಳಿ, ಮಂಜರಪಲ್ಲೆ, ರಾತ್ರಿ ಬಲಿ ಉತ್ಸವ, ಮಹಾಪೂಜೆ, ಅನ್ನಸಂತರ್ಪಣೆ, ಬಾಕಿಮಾರು ಚೆಂಡು .

ದಿನಾಂಕ: 05-03-2026ನೇ ಗುರುವಾರ ಬೆಳಿಗ್ಗೆ 7.30ರಿಂದ ಗಣಹೋಮ, 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12.00ಕ್ಕೆ ಬಲಿ ಹೊರಡುವುದು, ಪಲ್ಲಪೂಜೆ, ಶ್ರೀ ದೇವರ ಬ್ರಹ್ಮರಥಾರೋಹಣ, 1.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7.30ಕ್ಕೆ ರಥದಲ್ಲಿ ಹೂವಿನ ಪೂಜೆ, 8.00ಕ್ಕೆ ಬ್ರಹ್ಮರಥೋತ್ಸವ, ಶ್ರೀ ಭೂತಬಲಿ. ಕವಾಟ ಬಂಧನ, ಮಹಾಪೂಜೆ, ಅನ್ನಸಂತರ್ಪಣೆ, ಬಾಕಿಮಾರು ಚೆಂಡು.

ದಿನಾಂಕ 06-03-2026 ನೇ ಶುಕ್ರವಾರದಂದು ಬೆಳಿಗ್ಗೆ ಗಂಟೆ 7.00ಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಚೂರ್ಣೋತ್ಸವ ಬಲಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ನವಕ ಕಲಶಾಭಿಷೇಕ, ಪ್ರಸನ್ನಪೂಜೆ, ಮಧ್ಯಾಹ್ನ 1:00ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00ರಿಂದ ವಿವಿಧ ಸೇವೆಗಳು, ಭಜನೆ – ಶ್ರೀ ಅಶ್ವತ್ಥನಾರಾಯಣ ಭಜನಾ ಮಂಡಳಿ, ಬರಬೈಲು ಬೋಳ, ಅನ್ನಸಂತರ್ಪಣೆ, ದೈವಗಳ ಭಂಡಾರ ಇಳಿಯುವುದು, ಹೂವಿನ ಪೂಜೆ ರಾತ್ರಿ ಬಲಿ ಹೊರಡುವುದು, ಚಂದ್ರಮಂಡಲ ಬಲಿ ಸೇವೆ, ಕಟ್ಟೆಪೂಜೆ, ಅವಭೃತ ಸ್ನಾನ, ಧ್ವಜಾವರೋಹಣ, ದೈವಗಳ ನೇಮ ನಡೆಯಲಿದೆ.

ದಿನಾಂಕ : 07-03-2026ನೇ ಶನಿವಾರದಂದು ಮಹಾಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ ನಡೆಯಲಿರುವುದು.

ವಿ.ಸೂ.: ದಿನಾಂಕ 15-02-2026ನೇ ಅದಿತ್ಯವಾರ ಮಹಾಶಿವರಾತ್ರಿ, ರಾತ್ರಿ 7.00ರಿಂದ ಭಜನೆ, ಶ್ರೀ ಧೂಮಾವತಿ ಭಜನಾ ಮಂಡಳಿ ಪೊಸರ್ಮ ಬೋಳ, ಮಹಾಪೂಜೆ, ಉಪಹಾರ ನಡೆಯಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮಗಳು

ದಿನಾಂಕ 03-03-2026ನೇ ಮಂಗಳವಾರ ರಾತ್ರಿ ಗಂಟೆ 9.00ರಿಂದ ಶ್ರೀ ಕೋದಂಡರಾಮ ಕೃಪಾಷೋಷಿತ ಯಕ್ಷಗಾನ ಮಂಡಳಿ ಹನುಮಗಿರಿ , ಶ್ರೀ ಹನುಮಗಿರಿ ಮೇಳ ಇವರಿಂದ “ವರ್ಣ ಪಲ್ಲಟ” ಎಂಬ ಯಕ್ಷಗಾನ ನಡೆಯಲಿದೆ.

ದಿನಾಂಕ 04-03-2026ನೇ ಬುಧವಾರ ರಾತ್ರಿ ಗಂಟೆ 9-00ರಿಂದ ಜಿಲ್ಲೆಯ ಹವ್ಯಾಸಿ ಕಲಾವಿದರಿಂದ ನೃತ್ಯ,ಮಿಮಿಕ್ರಿ,ಯಕ್ಷಗಾನ,ಭರತನಾಟ್ಯ,ಹುಲಿವೇಷ ಹಾಗೂ ವಿಭಿನ್ನ ಶೈಲಿಯ ಕಾರ್ಯಕ್ರಮ ನಡೆಯಲಿರುವುದು.

ವಿಶೇಷ ಸೂಚನೆ : ದಿನಾಂಕ 04-03-2026ನೇ ಬುಧವಾರ ಬೆಳಗ್ಗೆ 9-00ರಿಂದ ಸಮೂಹಿಕ ಸಂಜೀವಿನಿ ಮೃತ್ಯುಂಜಯ ಹೋಮ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಾಂಕ 05-03-2026ನೇ ಗುರುವಾರದಂದು ರಥೋತ್ಸವದ ನೇರ ಪ್ರಸಾರವನ್ನು ತುಳುನಾಡು ವಾರ್ತೆ ಯುಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಿಸಬಹುದು.

LEAVE A REPLY

Please enter your comment!
Please enter your name here